ಪ್ರಕೃತಿ ಸಂರಕ್ಷಣೆ ನಿತ್ಯ ಕಾಯಕವಾಗಲಿ: ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘದ ಅಧ್ಯಕ್ಷ ಡಾ.ಮನೋಹರ್ ಕರೆ

Cloth hand bags and plant distribution Mandya
Published on

ಮಂಡ್ಯ: ಪ್ರಕೃತಿ ಸಂರಕ್ಷಣೆ ಕಾಯಕ ಪ್ರತಿನಿತ್ಯ ಆಗಬೇಕು ಎಂದು ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘದ ಅಧ್ಯಕ್ಷ ಡಾ.ಆರ್.ಮನೋಹರ್ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ರೂರಲ್ ಡವಲಪ್‌ಮೆಂಟ್ ಸೊಸೈಟಿ, ಜಿಲ್ಲಾ ಸ್ತ್ರೀರೋಗ ಮತ್ತು ಪ್ರಸೂತಿ ವೈದ್ಯರ ಸಂಘದಿಂದ ನಗರದ ಮಿಮ್ಸ್ ಆವರಣದ ಮಮತೆಯ ಮಡಿಲು ಕೇಂದ್ರದಲ್ಲಿ ಬಟ್ಟೆ ಕೈ ಚೀಲಗಳು ಮತ್ತು ಸಸ್ಯ ವಿತರಿಸಿ ಮಾತನಾಡಿದರು.

ದೈನಂದಿನ ಬದುಕಿನಲ್ಲಿ ಮಹಿಳೆ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಾಳೆ. ನಿಜವಾದ ಅನುಭವದ ಶಿಕ್ಷಣ ಮಹಿಳೆಯರಿಂದ ತಿಳಿಯುತ್ತದೆ. ಮಹಿಳೆ ಸುಶಿಕ್ಷಿತವಾಗಿದ್ದರೆ ಸುಸ್ಥಿರವಾಗಿರುತ್ತದೆ. ಇದನ್ನು ಅರ್ಥೈಸಿಕೊಂಡು ಪರಿಸರ ಸಂರಕ್ಷಣೆಯನ್ನು ಅತ್ಯಂತ ಕಾಳಜಿಯಿಂದ ಮಾಡಬೇಕಾಗಿದೆ. ಮಹಿಳೆಯರಿಂದ ಪ್ರಾರಂಭಗೊಂಡರೆ ಅದು ಯಶಸ್ಸು ಕೂಡ ಸಿಗುತ್ತದೆ. ಈ ದಿಸೆಯಲ್ಲಿ ನೀರು, ಗಾಳಿ ಮತ್ತು ಮಾಲಿನ್ಯವನ್ನು ತಡೆಗಟ್ಟುವ ಕಾಯಕದಲ್ಲಿ ತಾವು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಪರಿಸರ ಅಧಿಕಾರಿ ಡಿ.ಪಿ.ಗೀತಾ, ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ ಮಾತನಾಡಿದರು. ಉಪ ಪರಿಸರ ಅಧಿಕಾರಿಗಳಾ ಭವ್ಯಾ, ಅಶ್ವಿನಿ, ಸ್ತ್ರೀರೋಗ ತಜ್ಞೆ ಡಾ.ಶಿಲ್ಪಾ, ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ, ಸಂಚಾಲಕ ಬಸವರಾಜ್ ಸಂತೆಕಸಲಗೆರೆ ಇತರರಿದ್ದರು. ಇದೇ ವೇಳೆ 300 ಬಟ್ಟೆ ಬ್ಯಾಗ್ ಮತ್ತು 300ಕ್ಕೂ ಹೆಚ್ಚು ಹಣ್ಣಿನ ಗಿಡ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net