ಸಮಾರೋಪ ಸಮಾರಂಭ ನಾಳೆ

6 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​, ಡಾ. ಜಿ.ಎಸ್​. ಆಮೂರ ಜನ್ಮ ಶತಮಾನೋತ್ಸವ ಸಮಿತಿ ಹಾಗೂ ಡಾ. ಅಣ್ಣಾಜಿರಾವ ಶಿರೂರ ರಂಗಮಂದಿರ ಪ್ರತಿಷ್ಠಾನ ವತಿಯಿಂದ ಮೇ 8ರಂದು ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಡಾ. ಜಿ.ಎಸ್​. ಆಮೂರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಾಹಿತಿ ಡಾ. ಜಿ.ಎಂ. ಹೆಗಡೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ಶಶಿ ಆಮೂರ ಆಗಮಿಸುವರು. ಬೆಳಗ್ಗೆ 11 ಗಂಟೆಗೆ ಜಿ.ಎಸ್​. ಆಮೂರರ ಸಮಗ್ರ ಬೇಂದ್ರೆ ವಿಮರ್ಶೆ ಕೃತಿಯನ್ನು ಮನು ಬಳಿಗಾರ ಹಾಗೂ ಬೆಳಕಿನ ಬೆಳೆ ಕೃತಿಯನ್ನು ಜಯಂತ ಕಾಯ್ಕಿಣಿ ಬಿಡುಗಡೆ ಮಾಡುವರು. ಕೃತಿಗಳ ಸಂಪಾದಕರಾದ ಜಿ.ಎಂ. ಹೆಗಡೆ, ಎಂ.ಜಿ. ಹೆಗಡೆ ಉಪಸ್ಥಿತರಿರುವರು ಎಂದರು.

ಮಧ್ಯಾಹ್ನ 12 ಗಂಟೆಗೆ ಸಂವಾದ ನಡೆಯಲಿದ್ದು, ಗಣೇಶ ದೇವಿ, ಮಂಜುನಾಥ ಹಿರೇಮಠ ಉಪಸ್ಥಿತರಿರುವರು. ಮಧ್ಯಾಹ್ನ 1 ಗಂಟೆಗೆ ಜಿ.ಎಸ್​. ಆಮೂರ ಮತ್ತು ಕನ್ನಡ ಸಾಹಿತ್ಯ ವಿಮರ್ಶೆ ನಡೆಯಲಿದ್ದು, ಬೇಂದ್ರೆ ಸಾಹಿತ್ಯಾನುಸಂಧಾನ ಕುರಿತು ಗೀತಾ ವಸಂತ, ಕನ್ನಡ ಕಥನ ವಿಮರ್ಶೆ ಕುರಿತು ಶ್ರೀಧರ ಬಳಿಗಾರ ಹಾಗೂ ಕನ್ನಡ ಕಾದಂಬರಿ ವಿಮರ್ಶೆ ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡುವರು ಎಂದರು.

ಮಧ್ಯಾಹ್ನ 3.30ಕ್ಕೆ ಜಿ.ಎಸ್​. ಆಮೂರ ಬಾಂಧವ್ಯ ಕುರಿತು ರವಿ ಆಮೂರ, ಹೃಷಿಕೇಶ ಆಮೂರ, ಶ್ಯಾಮ ಆಮೂರ, ಶೈಲಜಾ ಆಮೂರ, ಅನುಪಮಾ ಪೂಜಾರ, ಜಯಂತ ಆಮೂರ, ಜಯಂತ ಪೂಜಾರ, ವೃಂದಾ ಆಮೂರ, ಹರ್ಷ ಡಂಬಳ, ವಿಜಯಾ ಗುತ್ತಲ, ಶ್ರೀನಿವಾಸ ವಾಡಪ್ಪಿ ಹಾಗೂ ಲೋಹಿತ ನಾಯ್ಕರ ಮಾತನಾಡುವರು. ಸಂಜೆ 5.30ಕ್ಕೆ ಜಯಂತ ಕಾಯ್ಕಿಣಿ ಸಮಾರೋಪ ಭಾಷಣ ಮಾಡುವರು ಎಂದರು.

ಜನ್ಮ ಶತಮಾನೋತ್ಸವ ಸಮಿತಿ ರಚಿಸಿ ಧಾರವಾಡ, ಗದಗ, ಬೆಂಗಳೂರು, ವಿಜಯಪುರ ಸೇರಿ ಇತರ ಕಡೆಗಳಲ್ಲಿ ಜಿ.ಎಸ್​. ಆಮೂರ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗಿದೆ. ಇದೀಗ ಧಾರವಾಡದಲ್ಲೇ ಸಮಾರೋಪ ನಡೆಸಲಾಗುತ್ತಿದೆ. ಆಮೂರರ ಶಿಷ್ಯಂದಿರು, ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದರು.

ಹ.ವೆಂ. ಕಾಖಂಡಕಿ, ಶ್ರೀನಿವಾಸ ವಾಡಪ್ಪಿ, ಹರ್ಷ ಡಂಬಳ, ಎಂ.ಎ. ಸುಬ್ರಹ್ಮಣ್ಯ, ಕೃಷ್ಣ ಕಟ್ಟಿ, ಸಮೀರ ಜೋಶಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net