ಪೌಷ್ಟಿಕ ಆಹಾರದಿಂದ ಉತ್ತಮ ಆರೋಗ್ಯ

11BK3
ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಹಾಗೂ ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜು ಮತ್ತು ಬೀದರ್ ವಿಶ್ವವಿದ್ಯಾಲಯದ ಸಹಯೋಗದಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿನಿಗೆ ಪುಸ್ತಕ ವಿತರಿಸಲಾಯಿತು. ಡಾ.ಸಂಗೀತಾ ಮಂಠಾಳೆ, ಪ್ರಾಚಾರ್ಯ ಡಾ.ಬಸವರಾಜ ಎವಳೆ, ಡಾ.ಶಿವಕುಮಾರ ಪಾಟೀಲ್, ಡಾ.ವಿಠೋಬಾ ದೊಣ್ಣೆಗೌಡರ, ಲೋಕೇಶ ಮನ್ನಾಳೆ, ಶಾಂತಕುಮಾರ ಭುರೆ ಇತರರಿದ್ದರು.
Published on

ಬಸವಕಲ್ಯಾಣ: ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಕಲಬುರಗಿ ವಿಭಾಗದ ಮೇಲ್ವಿಚಾರಕಿ ಡಾ.ಸಂಗೀತಾ ಮಂಠಾಳೆ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಹಾಗೂ ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜು ಮತ್ತು ಬೀದರ್ ವಿಶ್ವವಿದ್ಯಾಲಯದ ಸಹಯೋಗದಡಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎನ್ನೆಸ್ಸೆಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕೆ ಆತ್ಮವಿಶ್ವಾಸವೂ ಅವಶ್ಯಕ ಎಂದು ಹೇಳಿದರು.

ನೆಮ್ಮದಿ ಜೀವನಕ್ಕಾಗಿ ಪರಿಸರ ಸಂರಕ್ಷಣೆ ಅತ್ಯಾವಶ್ಯಕವಾಗಿದ್ದು, ವೈಯಕ್ತಿಕ, ಮಾನಸಿಕ, ಸಮಾಜಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಪ್ಲ್ಯಾಸ್ಟಿಕ್ ಬಳಕೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಪಾಕೀಟಿನಲ್ಲಿಯ ಆಹಾರ ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಸದೃಢ ರಾಷ್ಟ್ರ, ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ನಿಮ್ಮೆಲ್ಲರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಉತ್ತಮ ಸಂಸ್ಕಾರ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಶಿಬಿರ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಾಸ ಮಾಡುವ ಜತೆಗೆ ನಿಶ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರೊ.ವಿಠೋಬಾ ದೊಣ್ಣೆಗೌಡರ ಪ್ರಾಸ್ತಾವಿಕ ಮಾತನಾಡಿ, ಶಿಬಿರದಲ್ಲಿ ಒಂದು ವಾರ ನಡೆದ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಡಾ.ಶಿವಕುಮಾರ ಪಾಟೀಲ್, ಡಾ.ಶಾಂತಕುಮಾರ ಬಾಬನಗೋಳ. ಪ್ರೊ.ಆರ್‌ಡಿ.ಬಾಲಿಕಿಲೆ, ಪ್ರೊ. ಲಕ್ಷ್ಮೀಬಾಯಿ ಭಂಕೂರ, ಡಾ.ಸುರೇಶ ಎಚ್.ಆರ್., ಬಿಸಿಎ ಪ್ರಾಚಾರ್ಯ ಲೋಕೇಶ ಮನ್ನಾಳೆ, ಶಾಂತಕುಮಾರ ಭುರೆ, ಗ್ರಂಥಪಾಲಕ ಸೂರ್ಯಕಾಂತ ನಾಸೆ ಇತರರಿದ್ದರು. ವಿದ್ಯಾರ್ಥಿನಿ ಆರತಿ ಸ್ವಾಗತಿಸಿದರು. ರೇಣುಕಾ ವಂದಿಸಿದರು. ನೇತ್ರಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net