ಕಲಿಕೆಯ ವೇಳೆ ಬೇಡ ಅಧೈರ್ಯ, ಪಲಾಯನ...

Samaropa Lead
Published on

ವಿದ್ಯಾರ್ಥಿಗಳಿಗೆ ಡಾ. ಪಿ.ವಿ. ಭಂಡಾರಿ ಕರೆ

ಜೀವನ ವಿದ್ಯಾ ಶಿಬಿರದ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಕೆ ಮುಂದುವರಿಸಬೇಕು. ನಿಮ್ಮ ಹಿಂದೆ ವಿದ್ಯಾಪೋಷಕ್​ ಇದೆ. ಅಧೈರ್ಯದಿಂದ ಪಲಾಯನವಾದಿಗಳಾಗದೆ ಧೈರ್ಯದಿಂದ ಜೀವನ ಎದುರಿಸಿ. ಲಭಿಸಿದ ಶೈಶಕ್ಷಣಿಕ ಸಹಕಾರದಿಂದ ಉನ್ನತ ಸಾಧನೆ ಮಾಡಬೇಕು ಎಂದು ಉಡುಪಿಯ ಡಾ. ಪಿ.ವಿ. ಭಂಡಾರಿ ಕರೆ ನೀಡಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಮಾ.3ರಂದು ಸಂಜೆ ಆಯೋಜಿಸಿದ್ದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್​ ವಿದ್ಯಾರ್ಥಿಗಳ ಐದು ದಿನಗಳ ಜೀವನ ವಿದ್ಯಾ ಶೈಕ್ಷಣಿಕ ಸನಿವಾಸ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉದ್ಯಮಿ ಶ್ರೀಕಾಂತ ಅರಿಮಣಿತ್ತಾಯ, ಬೆಂಗಳೂರಿನ ವೆಂಕಟೇಶ ಮತ್ತು ನಂದಾ ವೆಂಕಟೇಶ, ಗಾಂಧಿ ಆಸ್ಪತ್ರೆಯ ಡಾ. ಹರಿಶ್ಚಂದ್ರ, ಉಡುಪಿ ನಗರಸಭಾ ಸದಸ್ಯ ಗಿರೀಶ್​ ಅಂಚನ್​, ಮಂಗಳೂರಿನ ವಸಂತ್​ ಆಚಾರ್ಯ, ದಿನೇಶ್​ ಪುತ್ರನ್​ ಉಪಸ್ಥಿತರಿದ್ದರು.

Samaropa 2
ಶಿಬಿರದ ನಿರ್ದೇಶಕರಾದ ಮಂಗಳೂರಿನ ಪ್ರೋಟೊ ಅಪ್​ ಸ್ಕಿಲ್​ನ ಗುರುದತ್ತ ಬಂಟ್ವಾಳಕರ್​, ಸಹನಾ ಕಿಣಿ ಹಾಗೂ ಬಳಗದವರನ್ನು ಸನ್ಮಾನಿಸಲಾಯಿತು. ಹತ್ತು ವಿದ್ಯಾರ್ಥಿಗಳು ಶಿಬಿರದಲ್ಲಾದ ಅನುಭವ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸುಬ್ರಹ್ಮಣ್ಯ ಬೈಪಡಿತ್ತಾಯ ಮತ್ತು ಯು. ಶ್ರೀಧರ್​ ಅವರು ನೀಡಿದ ಪುಸ್ತಕಗಳನ್ನು ವಿತರಿಸಲಾಯಿತು.

ಐದು ದಿನದ ಶಿಬಿರದಲ್ಲಿ ಮೇಜರ್​ ಸಿ.ಎಸ್​. ಆನಂದ್​, ಬನ್ನಾಡಿ ನಾರಾಯಣ ಆಚಾರ್ಯ, ಅಲೆವೂರು ಹರಿಕೃಷ್ಣ ಭಟ್​, ಡಾ. ಸುದರ್ಶನ್​ ಮೂರ್ತಿ, ಸಿಎ ಗಿರಿಧರ್​ ಕಾಮತ್​, ಡಾ. ನಿವೇದಿತಾ, ನಿರಾಲಿ ವೋರಾ, ಡಾ. ರಾಜೇಶ್ವರಿ ಭಟ್​, ಸುಧಾ ಅಡುಕುಳ, ಡಾ.ರಂಜಿತ್​ ಕುಮಾರ್​, ಡಾ. ಕುಮಾರ ನಾಯಕ್​, ಡಾ. ಪ್ರಸನ್ನ ಆಚಾರ್ಯ, ಮುರಳೀಧರ ರಾವ್​ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್​ ರಾವ್​ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಪ್ರಸಾದ್​ ವಂದಿಸಿದರು. ನಾರಾಯಣ ಎಂ. ಹೆಗಡೆ, ಎಚ್​.ಎನ್​. ಶೃಂಗೇಶ್ವರ, ಅಶೋಕ್​ ಎಂ. ಸಹಕರಿಸಿದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ 230 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net