ಮಣಿಪಾಲದ ಕೆನರಾ ಬ್ಯಾಂಕ್​ನಲ್ಲಿ ಹಿಂದಿ ದಿವಸ ಆಚರಣೆ

Canara Bank
Published on

ವ್ಯಂಗ್ಯಚಿತ್ರಕಾರ ಜೀವನ್​ ಶೆಟ್ಟಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಣಿಪಾಲದ ಕೆನರಾ ಬ್ಯಾಂಕ್​ ವೃತ್ತ ಕಚೇರಿಯಲ್ಲಿ ಮಹಾಪ್ರಬಂಧಕ ಎಚ್​.ಕೆ. ಗಂಗಾಧರ ಅವರ ಅಧ್ಯಕ್ಷತೆಯಲ್ಲಿ ಹಿಂದಿ ದಿವಸ ಆಚರಣೆ ಹಾಗೂ ಸಮಾರೋಪ ಸಮಾರಂಭ ನಡೆಯಿತು.

ದಂಡತೀರ್ಥ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಶಿವಣ್ಣ ಬಾಯರ್​ ಅವರು ಹಿಂದಿ ಭಾಷೆಯ ಪ್ರಾಮುಖ್ಯತೆ ಮತ್ತು ಬೆಳವಣಿಗೆ ಕುರಿತು ಉಪನ್ಯಾಸ ನೀಡಿದರು.

ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಗಣನೀಯ ಸಾಧನೆ, ಸೇವೆ ಸಲ್ಲಿಸಿದ ವ್ಯಂಗ್ಯಚಿತ್ರಕಾರ ಜೀವನ್​ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್​ನ ಹಿಂದಿ ಕಾರ್ಯಾಲಯದ ವತಿಯಿಂದ ಜೀವನ್​ ರಚಿಸಿರುವ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

ಹಿಂದಿ ದಿವಸ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಉಪ ಮಹಾಪ್ರಬಂಧಕ ಪವಿತ್ರಕುಮಾರ್​ ದಾಸ್​ ಉಪಸ್ಥಿತರಿದ್ದರು.

ಬ್ಯಾಂಕ್​ನ ಸಹಾಯಕ ಮಹಾಪ್ರಬಂಧಕ ಸಂಜಯ್​ ಖತ್ರಿ ಸ್ವಾಗತಿಸಿದರು. ಬ್ಯಾಂಕ್​ನ ಸಹಾಯಕ ಮಹಾಪ್ರಬಂಧಕ ಸಂದೀಪಕುಮಾರ್​ ಅಗರ್ವಾಲ್​, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಸಂದೇಶ ವಾಚಿಸಿ, ವಂದಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ರೇಖಾ ಟಿ.ಆರ್​. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net