ವೈದ್ಯ ಪದವಿ ಪಡೆಯದ ಆರೋಪ: ತಗ್ಗಹಳ್ಳಿ ಗ್ರಾಮದಲ್ಲಿ ಕ್ಲಿನಿಕ್ ಸೀಜ್

Clinic siege in Taggahalli village mandya
Published on

ಮಂಡ್ಯ: ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ವೈದ್ಯ ಪದವಿ ಪಡೆಯದ ವ್ಯಕ್ತಿಯೊಬ್ಬ ಇಂಗ್ಲಿಷ್ ಔಷಧ ನೀಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಬಿ.ಜವರೇಗೌಡ ದಾಳಿ ನಡೆಸಿ ಕ್ಲಿನಿನ್ ಅನ್ನು ಸೀಜ್ ಮಾಡಿದ್ದಾರೆ.

ನಿಖರವಾದ ಪದವಿ ಇಲ್ಲದ ಅತ್ತ ಎಂಬಿಬಿಎಸ್(ಅಲೋಪಥಿ), ಇತ್ತ ಆಯುರ್ವೇದಿಕ್(ಆಯುಷ್) ಪದವಿಯನ್ನೂ ಪಡೆಯದ ಮಂಜುನಾಥ ಎಂಬಾತ ನಿಯಮ ಬಾಹಿರವಾಗಿ ನಡೆಸುತ್ತಿದ್ದ ಕ್ಲಿನಿಕ್ ಅನ್ನು ಮುಚ್ಚಿಸಲಾಗಿದೆ ಎಂದು ಟಿಎಚ್‌ಒ ಮಾಹಿತಿ ನೀಡಿದ್ದಾರೆ.

ಆರೋಪಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ನೋಟಿಸ್ ನೀಡಲಾಗಿತ್ತು. ಅದನ್ನು ನಿರ್ಲಕ್ಷ್ಯಿಸಿ ಅಶುಚಿತ್ವದಿಂದ ಕೂಡಿದ ಸ್ಥಳದಲ್ಲಿ ಕ್ಲಿನಿಕ್ ಮುಂದುವರಿಸಿದ್ದರು. ಈ ವಿಷಯವಾಗಿ ನಮ್ಮ ಆರೋಗ್ಯ ಸಿಬ್ಬಂದಿ ಜತೆ ಸ್ಥಳಕ್ಕೆ ತೆರಳಿ ಕ್ಲಿನಿಕ್ ಸೀಜ್ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net