ಮಚ್ಚೇರಿಯಲ್ಲಿ ದೇವಸ್ಥಾನದ ಕಲಶಾರೋಹಣ

KDR darmika
ಮಚ್ಚೇರಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ, ಗಂಗಾಮಾಳಮ್ಮ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮದಲ್ಲಿ ಹುಣಸಘಟ್ಟದ ಹಾಲು ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿದ್ದರು. ಚಂದ್ರಪ್ಪ, ಎಂ.ಎಚ್. ರವಿ, ಬಸವರಾಜ್, ಚೆನ್ನಪ್ಪ ಇತರರಿದ್ದರು.
Published on

ಕಡೂರು: ಮಚ್ಚೇರಿಯಲ್ಲಿ ನಿರ್ಮಿಸಿರುವ ಶ್ರೀ ಮೈಲಾರಲಿಂಗೇಶ್ವರ-ಗಂಗಾಮಾಳಮ್ಮ ದೇವಸ್ಥಾನದ ಕಲಶಾರೋಹಣ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಹುಣಸಘಟ್ಟದ ಹಾಲುಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗೋಪುರ ಕಲಶಾರೋಹಣ ಮತ್ತು ಪ್ರಥಮ ಕುಂಭಾಭಿಷೇಕ ನೆರವೇರಿಸಿದರು. ಸುಮಂಗಲಿಯರು ಹೊಳೆಪೂಜೆ ನಡೆಸಿ ಗಂಗೆಯನ್ನು ಹೊತ್ತು ತಂದರು. ದೇವಸ್ಥಾನದಲ್ಲಿ ಕಳಾಹೋಮ ಮತ್ತಿತರ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪುರೋಹಿತ ದೇವಿಪ್ರಸಾದ ಶರ್ಮ ಮತ್ತು ಸಂಗಡಿಗರು ನೆರವೇರಿಸಿದರು. ಗ್ರಾಮಸ್ಥರಿಂದ ದೋಣಿಸೇವೆ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಹುಣಸಘಟ್ಟದ ಹಾಲು ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳನ್ನು ಕಟ್ಟಿದರೆ ಸಾಲದು. ಆ ಸ್ಥಳದ ಮಹತ್ವ ಮತ್ತು ಸಕಾರಾತ್ಮಕ ಶಕ್ತಿಯ ಪೂರ್ಣ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದರು. ದೇವಸ್ಥಾನದ ಗೌಡರಾದ ಎಂ.ಕೆ.ಚಂದ್ರಪ್ಪ, ಸಮಿತಿ ಅಧ್ಯಕ್ಷ ಎಂ.ಎಚ್.ರವಿ, ಗ್ರಾಪಂ ಸದಸ್ಯ ಚೆನ್ನಪ್ಪ, ಪೂಜಾರಿ ಬಸವರಾಜು, ಎಂ.ಟಿ.ಮಂಜುನಾಥ್, ಎಂ.ಎನ್.ಓಂಕಾರ್, ದೇವಸ್ಥಾನದ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net