

ಕುರುಗೋಡು: ಹಿಂಗಾರು ಜೋಳವನ್ನು ಬಾಧಿಸುತ್ತಿರುವ ಕಾಂಡ ಕೊರೆಯುವ ಕೀಟವನ್ನು ಸಮರ್ಪಕ ಕ್ರಿಮಿನಾಶಕ ಬಳಕೆಯಿಂದ ನಿಯಂತ್ರಿಸಬಹುದು ಎಂದು ಕೃಷಿ ಅಧಿಕಾರಿ ಎಂ.ದೇವರಾಜ ಹೇಳಿದರು.
ಪಟ್ಟಣದ ರೈತರ ಜಮೀನಿಗೆ ಶನಿವಾರ ಭೇಟಿ ನೀಡಿ ಹಿಂಗಾರು ಜೋಳ ಪರಿಶೀಲಿಸಿ ಮಾತನಾಡಿದರು. ತಾಲೂಕಿನಲ್ಲಿ ನಿರಂತರ ಮಳೆಯಿಂದ ಹಿಂಗಾರು ಜೋಳದ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಅಲ್ಲದೆ ವಾತಾವರಣ ಬದಲಾವಣೆಗೆ ಕಾಂಡ ಕೊರೆಯುವ ಕೀಟದ ಬಾಧೆ ಹೆಚ್ಚಾಗಿದೆ.
ಆದ್ದರಿಂದ ರೈತರು ಸಕಾಲಕ್ಕೆ ಬೆಳೆಗೆ ಹರಳು ರೂಪದ ಕೀಟನಾಶಕ ಕಾರ್ಲೊಫೀರನ್ 5 ಕೆ.ಜಿ, ಕ್ಲೋರೋ ಫಾಲಿಪಾಸ್ ಗ್ರಾನೆಸ 3 ಕೆ.ಜಿ ಹರಳು ರೂಪದ ಕೀಟನಾಶಕವನ್ನು ಒಂದು ಎಕರೆಗೆ 3-5 ಕೆ.ಜಿಯನ್ನು ಬೆಳೆಯ ಸುಳಿಗೆ ಹಾಕುವುದರಿಂದ ರೋಗ ಹತೋಟಿಗೆ ಬರಲಿದೆ ಎಂದು ತಿಳಿಸಿದರು.