ಬಸ್ ನಿಲ್ದಾಣದಲ್ಲಿ ಗಬ್ಬುನಾರುತ್ತಿದ್ದ ಚರಂಡಿ ತ್ಯಾಜ್ಯ ತೆರವು

17 SARAG 1
ಸರಗೂರು ತಾಲೂಕಿನ ಬಸ್ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿರುವ ದೃಶ್ಯ.
Published on

ಸರಗೂರು: ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಗಬ್ಬುನಾರುತ್ತಿದ್ದ ಚರಂಡಿಯ ತ್ಯಾಜ್ಯವನ್ನು ಇತ್ತೀಚೆಗೆ ತೆರವು ಮಾಡುವ ಮೂಲಕ ಪ್ರಯಾಣಿಕರು ಅನುಭವಿಸುತ್ತಿದ್ದ ನಿತ್ಯ ನರಕ ತಪ್ಪಿಸಿದಂತಾಗಿದೆ.

ನಿಲ್ದಾಣದಲ್ಲಿ ಚರಂಡಿಯಲ್ಲಿ ತ್ಯಾಜ್ಯ ತುಂಬಿ ಗಬ್ಬುನಾರುತ್ತಿತ್ತು. ಇದರಿಂದ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದರು. ಸಾಂಕ್ರಾಮಿಕ ರೋಗ ಹರಡು ಭೀತಿ ಎದುರಾಗಿತ್ತು. ಈ ಕುರಿತು ‘ನೈರ್ಮಲ್ಯ ತಾಣವಾದ ಬಸ್ ನಿಲ್ದಾಣ‘ ಶೀರ್ಷಿಕೆಯಡಿ ಆ.12ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಬಸ್ ನಿಲ್ದಾಣ ಪರಿಶೀಲಿಸಿದರು. ನಿಲ್ದಾಣದ ಹೋಟೆಲ್ ಮುಂಭಾಗದಲ್ಲಿ ಕೊಳಚೆ ನೀರು ಹಾಗೂ ನಿಲ್ದಾಣದ ಚರಂಡಿ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net