ಹಳೇ ಸೇತುವೆಯಲ್ಲಿ ಬೆಳೆದಿದ್ದ ಗಿಡಗಂಟಿ ತೆರವು

25 nov tnp 02
ತಿ.ನರಸೀಪುರ ಪಟ್ಟಣದ ತಿರುಮಕೂಡಲು ಬಳಿ ಕಬಿನಿ ನದಿಯ ಹಳೇ ಸೇತುವೆ ಎರಡೂ ಬದಿ ಬೆಳೆದಿದ್ದ ಆನಗೊಬ್ಬಳಿ ಮುಳುಗಿಡಗಳನ್ನು ತೆರವುಗೊಳಿಸಲಾಯಿತು.
Published on

ತಿ.ನರಸೀಪುರ: ಪಟ್ಟಣದ ತಿರುಮಕೂಡಲು ಬಳಿ ಕಬಿನಿ ನದಿಯ ಹಳೇ ಸೇತುವೆಯ ಎರಡೂ ಬದಿ ಬೆಳೆದಿದ್ದ ಗಿಡಗಂಟಿಯನ್ನು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ವೈದ್ಯರ ವಿಭಾಗದ ಅಧ್ಯಕ್ಷ ಡಾ.ಬಿ.ಪ್ರದೀಪ್ ಸೋಮವಾರ ಪುರಸಭಾ ಸಿಬ್ಬಂದಿಯೊಂದಿಗೆ ತೆರವುಗೊಳಿಸಿದರು.

ರಾಷ್ಟ್ರೀಯ ಹೆದ್ದಾರಿ- 212ರ ವ್ಯಾಪ್ತಿಯ ಕಬಿನಿ ನದಿಯ ಹಳೇ ಸೇತುವೆ ರಸ್ತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಗುಂಡಿ ಬಿದ್ದು ಹಾಳಾಗಿದೆ. ಅಲ್ಲದೆ ಸೇತುವೆಯ ಎರಡು ಬದಿಯಲ್ಲೂ ಬೆಳೆದು ನಿಂತಿರುವ ಆನಗೊಬ್ಬಳಿ ಮುಳ್ಳಿನ ಗಿಡಗಳು ಜನ-ವಾಹನ ಸಂಚಾರಕ್ಕೆ ತೊಡಕಾಗಿತ್ತು. ಇದನ್ನು ಅರಿತ ಸಮಾಜ ಸೇವಕ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ವೈದ್ಯರ ವಿಭಾಗದ ಅಧ್ಯಕ್ಷ ಡಾ.ಬಿ.ಪ್ರದೀಪ್ ಪುರಸಭೆ ಗಮನಕ್ಕೆ ತಂದು, ತಾವೇ ಖುದ್ದಾಗಿ ನಿಂತು ಸಿಬ್ಬಂದಿಯೊಂದಿಗೆ ಗಿಡಗಂಟಿ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net