

ಅರಕಲಗೂಡು: ತಾಲೂಕಿನ ಮತ್ತಿಗೋಡು ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸಿದರು.
ರಾಮನಾಥಪುರ ರಾಜಸ್ವ ನಿರೀಕ್ಷಕ ಸಿ. ಸ್ವಾಮಿ, ಗ್ರಾಮಲೆಕ್ಕಿಗ ಕಾರ್ತಿಕ್ ಅವರು ಸ್ಥಳಕ್ಕೆ ತೆರಳಿ ಗ್ರಾಮದ ಸರ್ವೆ ನಂ. 13ರಲ್ಲಿ 2 ಎಕರೆ 6 ಕುಂಟೆ ವಿಸ್ತೀರ್ಣದ ಕೆರೆಯಲ್ಲಿ ಒತ್ತುವರಿಯಾಗಿದ್ದ 15 ಕುಂಟೆಯನ್ನು ತೆರವುಗೊಳಿಸಿದರು. ತೆರವು ಮಾಡಿದ ಪ್ರಸ್ತಾವನೆಯನ್ನು ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
ಮೋಜಿಣಿದಾರರಾದ ರಾಜೇಶ್ವರಿ, ಗ್ರಾಮ ಲೆಕ್ಕಿಗ ಧರ್ಮೇಶ್ ಹಾಗೂ ಗ್ರಾಮಸ್ಥರು ಇದ್ದರು.