ನೀರು ಹರಿವಿಗೆ ತಡೆಯಾಗಿದ್ದ ಕಂಪೌಂಡ್ ತೆರವು

kota (3)
Published on

ಕೋಟ: ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಬುಕಳದ ಸಮೀಪ ದೂಳಂಗಡಿ ಸಾವಿತ್ರಿ ಗಾಣಿಗರ ಮನೆಗೆ ಮಳೆ ನೀರು ನುಗ್ಗಿದ ಪರಿಣಾಮ ಮನೆ ವಠಾರ ನೀರಿನಿಂದ ಆವೃತವಾಗಿತ್ತು. ಈ ಬಗ್ಗೆ ಬ್ರಹ್ಮಾವರದ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕೋಟ ಕಂದಾಯ ನಿರೀಕ್ಷಕ ಮಂಜು ಬಿಲ್ಲವ ಹಾಗೂ ಐರೋಡಿ ಗ್ರಾಮ ಲೆಕ್ಕಿಗ ಚಲುವರಾಜು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಸಮೀಪದ ಒಂದೆರಡು ಮನೆಯವರು ಸರಾಗವಾಗಿ ಹರಿಯುವ ನೀರಿಗೆ ಕಂಪೌಂಡ್ ಕಟ್ಟಿ ತಡೆಯೊಡ್ಡಿದ್ದರಿಂದ ಮನೆಯಂಗಳಕ್ಕೆ ನೀರು ನುಗ್ಗಿತ್ತು. ಅಧಿಕಾರಿಗಳ ಸಮ್ಮುಖದಲ್ಲಿ ಕಂಪೌಂಡ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net