ಅರ್ಕಾವತಿ ಸೇತುವೆಯಲ್ಲಿದ್ದ ಗಿಡ-ಗಂಟಿ ತೆರವು

Rmgm-Ph-001-Palasruthi Varadi -Arkavathi Sethuve Gida Gende-Theravu News Photo- 13-9-2024
Published on

* ರಾಮನಗರ ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ರಾಮನಗರ

ನಗರದ ಪ್ರಮುಖ ಅರ್ಕಾವತಿ ಸೇತುವೆ ಅಕ್ಕಪಕ್ಕ ಬೆಳೆದಿದ್ದ ಗಿಡ&ಗಂಟಿ ತೆರವು ಮಾಡಲು ನಗರಸಭೆ ಮುಂದಾಗಿದೆ.

ರಾಮನಗರದ ಹೃದಯಭಾಗದಲ್ಲಿ ಅರ್ಕಾವತಿ ನದಿ ಹಾದು ಹೋಗಿದೆ. ನದಿಯ ಎರಡೂ ಭಾಗದಲ್ಲಿ ನಗರ ಬೆಳೆದಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಬೆಂಗಳೂರು- ಮೈಸೂರು ರಸ್ತೆಗೆ ಸಂಪರ್ಕಕಲ್ಪಿಸುವ ಹಳೇ ಬಸ್​ ನಿಲ್ದಾಣ ಸಮೀಪ ರೈಲ್ವೆ ನಿಲ್ದಾಣ ರಸ್ತೆಗೆ ಹೋಗಲು ಮುಖ್ಯರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ಈ ಸೇತುವೆ ಉದ್ದಕ್ಕೂ ಅರಳಿ ವೃಕ್ಷಗಳು ಆಳೆತ್ತರಕ್ಕೆ ಬೆಳೆದು ಸೇತುವೆ ಶಿಥಿಲಾವಸ್ಥೆಗೆ ತಲುಪುವಂತಾಗಿತ್ತು.

ಈ ಸಂಬಂಧ "ವಿಜಯವಾಣಿ' ಆ.1ರಂದು "ಅರ್ಕಾವತಿ ಸೇತುವೆಗೆ ಗಿಡ-ಗಂಟಿ ಕಂಟಕ' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಶುಕ್ರವಾರ ಸೇತುವೆ ಅಕ್ಕಪಕ್ಕದಲ್ಲಿ ಬೆಳೆದ ಅರಳಿ ವೃಕ್ಷ, ಗಿಡ ಗಂಟಿ ತೆರವು ಮಾಡಲು ಮುಂದಡಿ ಇಟ್ಟಿದ್ದು, ನದಿಯಲ್ಲಿ ನೀರು ಇರುವ ಕಾರಣ ದೊಡ್ಡ ಕ್ರೇನ್​ ನೆರವಿನೊಂದಿಗೆ ಗಿಡ ಗಂಟಿ ತೆರವು ಮಾಡಿದರು. ಖುದ್ದು ನಗರಸಭೆ ಪೌರಾಯುಕ್ತ ಡಾ. ಜಯಣ್ಣ ಸ್ಥಳದಲ್ಲಿದ್ದು, ತೆರವು ಕಾರ್ಯಾಚರಣೆ ವೀಸಿ ಕೆಲಸಗಾರರಿಗೆ ನಿರ್ದೇಶನ ನೀಡಿದರು.

ಕೆಮಿಕಲ್​ ಬಳಕೆ

ಸೇತುವೆ ಅಕ್ಕಪಕ್ಕ ಬೆಳೆದಿದ್ದ ಮರದ ಬೇರು ಸಿಮೆಂಟ್​ ಒಳಗೆ ಹೋಗಿದೆ. ಆದ್ದರಿಂದ ಪುನಃ ಚಿಗುರದಂತೆ ಗಿಡದ ಬುಡಕ್ಕೆ ಕೆಮಿಕಲ್​ ಬಳಸಲು ನಗರಸಭೆ ಅಧಿಕಾರಿಗಳು ಉಪಾಯ ಮಾಡಿದ್ದಾರೆ.

ಸೇತುವೆ ಅಕ್ಕಪಕ್ಕ ಬೆಳೆದ ಗಿಡ&ಗಂಟಿ ತೆರವು ಮಾಡಿ ಎಂದು ಕಳೆದ 2 ವರ್ಷಗಳಿಂದಲೂ ಮನವಿ ಮಾಡಿದ್ದೆವು. ಹೊಸದಾಗಿ ಬಂದ ಪೌರಾಯುಕ್ತರು ಸ್ಪಂದಿಸಿರುವುದು ಸಂತಸವಾಗಿದೆ.

> ವಿಜಯಕುಮಾರ್​, ಸ್ಥಳಿಯ ನಿವಾಸಿ, ರಾಮನಗರ.

ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ಮುಂಜಾಗ್ರತಾ ಕ್ರಮ ಅನುಸರಿಸಿ ದೊಡ್ಡ ಕ್ರೇನ್​ ಬಳಸಿಕೊಂಡು ಕಾರ್ಮಿಕರ ನೆರವನಿಂದ ಗಿಡ&ಗಂಟಿ ತೆರವು ಮಾಡಿಸಲಾಗುತ್ತಿದೆ. ಜತೆಗೆ ಹೊಸ ಸೇತುವೆಯಲ್ಲೂ ಕಾರ್ಯಾಚರಣೆ ಮಾಡಿಸಲಾಗುತ್ತಿದೆ. ನಗರಸಭೆ ಆಸ್ತಿ ರಕ್ಷಣೆ ಮತ್ತು ನಗರದ ಶುಚಿತ್ವಕ್ಕೆ ಒತ್ತು ನೀಡುವುದು ನಮ್ಮ ಕರ್ತವ್ಯ.

> ಡಾ. ಜಯಣ್ಣ

ಆಯುಕ್ತರು, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net