ಜಮೀನು ರಸ್ತೆಗಾಗಿ ಅರಣ್ಯ ಪ್ರದೇಶದ ಮರಗಳ ಹನನ

03-GPT-2A
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸೆಕ್ಷನ್ 4 ಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಮರಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ತೊಡಗಿದ್ದ ಜೆಸಿಬಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Published on

ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಸೆಕ್ಷನ್ 4ಗೆ ಸೇರಿದ ಅರಣ್ಯ ಪ್ರದೇಶದಲ್ಲಿ ಮರ ತೆರವುಗೊಳಿಸುತ್ತಿದ್ದ ಜೆಸಿಬಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಗ್ರಾಮದ ದೊರೆರಾಜ್ ಅವರು ತಮ್ಮ ಜಮೀನಿಗೆ ಹೋಗುವ ದಾರಿಗಾಗಿ ಸೆಕ್ಷನ್ 4ಗೆ ಸೇರಿದ ಅರಣ್ಯದಲ್ಲಿ ಬೆಳೆದಿದ್ದ ಹಲವಾರು ಮರಗಳನ್ನು ಮಂಗಳವಾರ ಜೆಸಿಬಿಯಿಂದ ತೆರವುಗೊಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬಫರ್ ವಲಯದ ಆರ್.ಎಫ್.ಒ ಬಿ.ಎಂ.ಮಲ್ಲೇಶ್, ಉಪ ವಲಯಾರಣ್ಯಾಧಿಕಾರಿ ಮುದ್ದುರಾಜ್, ಫಾರೆಸ್ಟರ್ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆಗಾಗಲೇ ಜಮೀನು ಹಾಗೂ ಅರಣ್ಯಕ್ಕೆ ಸೇರಿದ ಸುಮಾರು 100ಕ್ಕೂ ಹೆಚ್ಚಿನ ಮರಗಳನ್ನು ಕಿತ್ತು ದಾರಿ ನಿರ್ಮಾಣ ಮಾಡಲಾಗುತ್ತಿತ್ತು. ಹಲವಾರು ಮರಗಳನ್ನು ಹಳ್ಳಕ್ಕೆ ಹೂತು ಮೇಲೆ ಮಣ್ಣು ಹಾಕಲಾಗಿತ್ತು. ಅರಣ್ಯಾಧಿಕಾರಿಗಳನ್ನು ಕಂಡ ಜೆಸಿಬಿ ಚಾಲಕ ಪರಾರಿಯಾಗಿದ್ದ. ರಸ್ತೆ ನಿರ್ಮಾಣಕ್ಕಾಗಿ ತೆರವುಗೊಳಿಸಿದ ಮರಗಳ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net