

ಕಡಬ: ಕೊಯಿಲ ಗ್ರಾಮದ ಸಬಳೂರು, ಸೀಗೆತ್ತಡಿ, ಪಾನ್ಯಾಲು, ತಿಮರೆಗುಡ್ಡೆ, ಓಕೆ, ಕಡೆಂಬ್ಯಾಲು, ಕೊಲ್ಯ ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ಭಾನುವಾರ ವಿದ್ಯುತ್ ಬಳಕೆದಾರರು ಶ್ರಮದಾನದ ಮೂಲಕ ಮಾಡಿದರು.
ಪವರ್‌ಮ್ಯಾನ್‌ಗಳಾದ ವಿಶ್ವನಾಥ ರಾಮಕುಂಜ, ಭವಿತ್ ಖಂಡಿಗ ಮಾರ್ಗದರ್ಶನದಲ್ಲಿ ತೆರವು ಕಾರ್ಯ ನಡೆಯಿತು. ಚೆನ್ನಪ್ಪ ಗೌಡ ಪಾನ್ಯಾಲು, ಚಿದಾನಂದ ಪಾನ್ಯಾಲು, ಹೊನ್ನಪ್ಪ ಸೀಗೆತ್ತಡಿ, ಶೀನಪ್ಪ ಸೀಗೆತ್ತಡಿ, ಭಾಸ್ಕರ ಕಡೆಂಬ್ಯಾಲು, ಜಯ್ರಕಾಶ್ ಕಡೆಂಬ್ಯಾಲು, ಕೃಷ್ಣಪ್ಪ ತಿಮರೆಗುಡ್ಡೆ, ಪ್ರವೀಣ್‌ರಾಜ್ ಕೊಲ್ಯ, ತಿಮ್ಮಪ್ಪ, ದಯಾನಂದ, ಲಿಂಗಪ್ಪ, ರಾಧಕೃಷ್ಣ ಟಿ., ಗೌತಮ್ ಪಾನ್ಯಾಲು, ಪೆರ್ನು ಗೌಡ ಕಡೆಂಬ್ಯಾಲು, ದೇವರಾಜು ಕಡೆಂಬ್ಯಾಲು, ತಿಮ್ಮಪ್ಪ ತಿಮರೆಗುಡ್ಡೆ, ಸೀತಾರಾಮ ಕೊಲ್ಯ, ಸತೀಶ ಕೊಲ್ಯ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ತುಂಬೆತ್ತಡ್ಕ, ಗುಲ್ಗೋಡಿ, ಕೊಲ್ಯ, ಖಂಡಿಗ ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ಭಾನುವಾರ ಈ ಭಾಗದ ವಿದ್ಯುತ್ ಗ್ರಾಹಕರು ಶ್ರಮದಾನದ ಮೂಲಕ ಮಾಡಿದರು.
ಪವರ್‌ಮನ್‌ಗಳಾದ ವಿಶ್ವನಾಥ ರಾಮಕುಂಜ, ಭವಿತ್ ಖಂಡಿಗ ಮಾರ್ಗದರ್ಶನದಲ್ಲಿ ತೆರವು ಕಾರ್ಯ ನಡೆಯಿತು. ಶ್ರೀಧರ ತುಂಬೆತ್ತಡ್ಕ, ಪುರಂದರ ತುಂಬೆತ್ತಡ್ಕ, ವಸಂತ ಕೊಲ್ಯ, ಹೊನ್ನಪ್ಪ ಕೊಲ್ಯ, ಮುತ್ತಪ್ಪ ಹೊಸಗದ್ದೆ, ಬಾಲಕೃಷ್ಣ ಕೊಲ್ಯ, ಗಿರೀಶ ಖಂಡಿಗ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.