

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮುಖ್ಯಮಂತ್ರಿಗಳ ಘೋಷಣೆಯೊಂದಿಗೆ ತಾಲೂಕಿನಾದ್ಯಂತ ಕೆರೆಗಳ ಒತ್ತುವರಿ ತೆರವು ಆರಂಭಿಸಲಾಗಿದೆ ಎಂದು ತಹಸೀಲ್ದಾರ್ ಸುಮಂತ್ ತಿಳಿಸಿದರು.
ಚಿಕ್ಕಮಗಳೂರು ತಾಲೂಕು ಕಸಬಾ ಹೋಬಳಿಯ ಹನುಮದೇವರ ಕೆರೆ ೧.೫೩ ಹೆಕ್ಟೇರ್‌ಗೆ ನೀರೊದಗಿಸುತ್ತಿದ್ದು, ಈ ಕೆರೆಯ ಒತ್ತುವರಿಯನ್ನು ಶನಿವಾರ ತೆರೆವುಗೊಳಿಸಲಾಗಿದೆ ಎಂದು ಹೇಳಿದರು.
ಚಿಕ್ಕಮಗಳೂರು ತಾಲೂಕಿನಲ್ಲಿ ೬೬೮ ಕೆರೆಗಳಿದ್ದು, ಈ ಪೈಕಿ ಸರ್ವೆ ಮಾಡಿದಾಗ ೩೪೪ ಕೆರೆಗಳ ೨೬೨ ಎಕರೆ ಒತ್ತುವರಿಯಾಗಿರುವುದು ಕಂಡುಬAದಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ವರ್ಷದಿಂದ ಕೆರೆಗಳ ಒತ್ತುವರಿಯನ್ನು ತೆರವು ಮಾಡುತ್ತಿz್ದೆÃವೆ ಎಂದರು.
ಈಗಾಗಲೇ ೪೦ ಕೆರೆಗಳ ಒತ್ತುವರಿಯನ್ನು ಖುಲ್ಲಾ ಮಾಡಿ ೭೯ ಎಕರೆಯಷ್ಟು ಜಾಗ ತೆರವು ಮಾಡಿz್ದÉÃವೆ. ಇನ್ನೂ ೩೦೪ ಕೆರೆಗಳ ಒತ್ತುವರಿ ತೆರವು ಬಾಕಿಯಿದೆ. ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ನೀಡಿರುವ ಗುರಿಯಂತೆ ಪ್ರತೀ ತಿಂಗಳು ೧೬ ಕೆರೆಗಳ ಒತ್ತುವರಿಯನ್ನು ತೆರವು ಮಾಡುತ್ತಿz್ದÉÃವೆ ಎಂದು ಮಾಹಿತಿ ನೀಡಿದರು.
ಹನುಮ ದೇವರ ಕೆರೆಯಲ್ಲಿ ೧.೨೦ ಎಕರೆ ಒತ್ತುವರಿಯಾಗಿದೆ. ತೆರವು ಮಾಡಿದ ನಂತರ ಟ್ರಂಚ್ ಹೊಡೆದು ನಗರಸಭೆ ವತಿಯಿಂದ ತಂತಿಬೇಲಿ ಅಳವಡಿಸುತ್ತೇವೆ. ಈ ಕಾರ್ಯ ನಗರಸಭೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ನಡೆಸಲಾಗುತ್ತಿದೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ವಿಕಾಸ್ ಮಾತನಾಡಿ, ತಾಲೂಕಿನಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ೩೩ ಕೆರೆಗಳಿದ್ದು, ಇದರಲ್ಲಿ ೧೭ ಕೆರೆಗಳು ಒತ್ತುವರಿಯಾಗಿರುವುದು ಸರ್ವೆ ಮಾಡಿದಾಗ ತಿಳಿದು ಬಂದಿದೆ. ಜಿಲ್ಲಾಡಳಿತ ಆದೇಶದಂತೆ ಕೆರೆಗಳ ಕಂದಾಯ ಗಡಿ ಗುರುತಿಸಿದ್ದು, ಆ ಮೂಲಕ ಕೆರೆಗಳ ಸುತ್ತ ತಂತಿಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಕೆರೆ ಅಭಿವೃದ್ಧಿಗೆ ೧.೦೪ ಕೋಟಿ ರೂ ಅನುದಾನ ಮೀಸಲಿಡಲಾಗಿದೆ. ಮುಂದೆ ಕೆರೆಗಳ ಅಭಿವೃದ್ಧಿಗೆ ಶಾಸಕರ ಗಮನ ಸೆಳೆದು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್‌ಐ ಸಂತೋಷ್, ಸರ್ವೆಯರ್ ದೋರೆರಾಜ್ ಮತ್ತಿತರರಿದ್ದರು.