ಒಣ ಮರ, ರೆಂಬೆ-ಕೊಂಬೆ ತೆರವು: ನಾಗರಿಕರಿಂದ ಮಾಹಿತಿ ಕೋರಿದ ಬಿಬಿಎಂಪಿ

old trees
Published on

ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿನ ರಸ್ತೆ ಬದಿ, ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ-ಕೊಂಬೆಗಳನ್ನು ಮುಂಜಾಗ್ರತಾ ಕ್ರಮವಾಗಿ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.

ಬಹುದಿನಗಳ ಬಳಿಕ ಇದೇ ಮೊದಲ ಬಾರಿಗೆ ಪಾಲಿಕೆ ಸ್ವಯಂಪ್ರೇರಿತವಾಗಿ ಅಪಾಯದ ಸ್ಥಿತಿಯಲ್ಲಿರುವ ಶಿಥಿಲ ಮರಗಳನ್ನು ತೆರವು ಮಾಡಲು ಕಾರ್ಯಕ್ರಮ ರೂಪಿಸಿದೆ. ಜತೆಗೆ ರಸ್ತೆಬದಿ, ಬಡಾವಣೆಗಳಲ್ಲಿ ಜನರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವ ಮರಗಳ ಬಾಗಿನ ರೆಂಬೆ, ಕೊಂಬೆಗಳನ್ನು ತೆರವುಗೊಳಿಸಲು ಪಾಲಿಕೆಯ ಅರಣ್ಯ ವಿಭಾಗವು ಸಾರ್ವಜನಿಕರಿಂದ ಮಾಹಿತಿ ಕೋರಿದೆ.

ನಾಗರಿಕರು ನಗರ ವ್ಯಾಪ್ತಿಯಲ್ಲಿ ಕಂಡುಬರುವ ಇಂತಹ ಅಪಾಯಕಾರಿ ಮರಗಳು, ಒಣಗಿದ ರೆಂಬೆಗಳು ಕಂಡುಬಂದಲ್ಲಿ ಇವುಗಳ ಮಾಹಿತಿಯನ್ನು ಪಾಲಿಕೆಯ ಅಧಿಕಾರಿಗಳಿಗಳಿಗೆ ದೂರವಾಣಿ ಮೂಲಕ (ವಾಟ್ಸ್ ಆ್ಯಪ್ ಮುಖಾಂತರ ಜಿಪಿಎಸ್ ಸಹಿತ ಫೋಟೋ ಲಗತ್ತಿಸಿ) ವಿಳಾಸದೊಂದಿಗೆ ಕಳುಹಿಸಿಕೊಡಬಹುದು ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಿ.ಎಲ್. ಸ್ವಾಮಿ ಕೋರಿದ್ದಾರೆ.

ವಲಯವಾರು ಅಧಿಕಾರಿಗಳ ಮೊಬೈಲ್ ವಿವರ:

* ಉಪ ವಿಭಾಗ-1: ಎ.ಡಿ.ಪ್ರಕಾಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ - 9663035011

(ಪೂರ್ವ, ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯ)

* ಉಪ ವಿಭಾಗ-2: ಸಂತೋಷ್‌ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ - 7019464699

(ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ, ಆರ್.ಆರ್. ನಗರ ವಲಯ)

* ಪೂರ್ವ ವಲಯ: ತಿಮ್ಮಪ್ಪ, ವಲಯ ಅರಣ್ಯಾಧಿಕಾರಿ - 9380090027

ರವೀಂದ್ರನಾಥ್, ಉಪ ವಲಯ ಅರಣ್ಯಾಧಿಕಾರಿ - 6361903330

* ಪಶ್ಚಿಮ ವಲಯ: ಶಿವರಾಮು, ವಲಯ ಅರಣ್ಯಾಧಿಕಾರಿ - 9480683341

* ದಕ್ಷಿಣ ವಲಯ: ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ - 7760553545

ಹರೀಶ್ ಎಚ್.ಆರ್, ಉಪ ವಲಯ ಅರಣ್ಯಾಧಿಕಾರಿ - 9480685039

* ದಾಸರಹಳ್ಳಿ ವಲಯ: ರಾಜಪ್ಪ.ಕೆ.ಎನ್, ಪ್ರಭಾರ ವಲಯ ಅರಣ್ಯಾಧಿಕಾರಿ - 9448234928

* ಬೊಮ್ಮನಹಳ್ಳಿ ವಲಯ: ನರೇಂದ್ರ ಬಾಬು, ಪ್ರಭಾರ ವಲಯ ಅರಣ್ಯಾಧಿಕಾರಿ - 9480685399

* ಯಲಹಂಕ ವಲಯ: ಚಂದ್ರಪ್ಪ.ವಿ, ಪ್ರಭಾರ ವಲಯ ಅರಣ್ಯಾಧಿಕಾರಿ - 9064042566

* ಆರ್.ಆರ್.ನಗರ ವಲಯ: ಎಸ್.ಆರ್.ಕೃಷ್ಣ, ವಲಯ ಅರಣ್ಯಾಧಿಕಾರಿ - 7760553545

* ಮಹದೇವಪುರ ವಲಯ: ಪುಷ್ಪ. ಎಂ, ವಲಯ ಅರಣ್ಯಾಧಿಕಾರಿ - 8147276414

ಸುದರ್ಶನ್.ಎ, ಉಪ ವಲಯ ಅರಣ್ಯಾಧಿಕಾರಿ - 7899555182

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net