ಇಂಗ್ಲಿಷ್ ನಾಮಫಲಕಗಳ ತೆರವು ಕಾರ್ಯಾಚರಣೆ

Clearance operation of English nameplates
ಇಳಕಲ್ಲ ನಗರದ ಎಸ್.ಆರ್. ಕಂಠಿ ವೃತ್ತದಲ್ಲಿನ ಅಂಗಡಿ ಮೇಲಿನ ಇಂಗ್ಲಿಷ್ ನಾಮಫಲಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡ ನಗರಸಭೆ ಅಧಿಕಾರಿಗಳು. ಆರೋಗ್ಯ ನಿರೀಕ್ಷಕ ಮನೋಹರ ದೊಡ್ಡಮನಿ, ಬಸಣ್ಣ ಕಿರಗಿ, ಮಂಜುನಾಥ ಮಾದರ, ನಗರಸಭೆ ಸಿಬ್ಬಂದಿ ಇದ್ದರು.
Published on

ಇಳಕಲ್ಲ: ನಗರದ ವಿವಿಧ ಭಾಗಗಳಲ್ಲಿ ನಗರಸಭೆ ಅಧಿಕಾರಿಗಳು ಸರ್ಕಾರಿ ಕಚೇರಿ, ಮಳಿಗೆ, ಅಂಗಡಿಗಳ ಮೇಲಿನ ಇಂಗ್ಲಿಷ್ ನಾಮಫಲಕಗಳ ತೆರವು ಕಾರ್ಯಾಚರಣೆ ನಡೆಸಿದರು.

ವಾರದ ಹಿಂದೆಯಷ್ಟೇ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಕೆಲವರು ಇನ್ನೂ ಇಂಗ್ಲಿಷ್ ನಾಮಫಲಕಗಳನ್ನು ತೆಗೆದು ಕನ್ನಡದಲ್ಲಿ ಬರೆಸಿರಲಿಲ್ಲ. ಹೀಗಾಗಿ ಅಧಿಕಾರಿಗಳು ನಗರದಲ್ಲೆಲ್ಲ ಸುತ್ತಾಡಿ ಇಂಗ್ಲಿಷ್ ನಾಮಫಲಕ ತೆರವುಗೊಳಿಸಿದರು.

ಹೃದಯ ಭಾಗದಲ್ಲಿನ ದಿ. ಎಸ್.ಆರ್. ಕಂಠಿ ವೃತ್ತದಲ್ಲಿನ ನಗರಸಭೆ ಮಳಿಗೆಯಲ್ಲಿ ಬಾಡಿಗೆ ಅಂಗಡಿಗಳು, ಬೇಕರಿ, ಫೂಟ್‌ವೇರ್, ಮತ್ತಿತರ ಅಂಗಡಿಗಳ ಮೇಲಿನ ಇಂಗ್ಲಿಷ್ ನಾಮಫಲಕಗಳನ್ನು ತೆಗೆದು ಹಾಕಲಾಯಿತು. ಆರೋಗ್ಯ ನಿರೀಕ್ಷಕ ಮನೋಹರ ದೊಡ್ಡಮನಿ, ಬಸಣ್ಣ ಕಿರಗಿ, ಮಂಜುನಾಥ ಮಾದರ, ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net