

ಕಿಕ್ಕೇರಿ: ಇಲ್ಲಿನ ಕೋಟೆ ಗಣಪತಿ ದೇವಾಲಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಹಿನ್ನೆಲೆಯಲ್ಲಿ ನಿರುಪಯುಕ್ತ ಸರ್ಕಾರಿ ಶಾಲಾ ಕಟ್ಟಡವನ್ನು ಕೆಡವಿ ದಾರಿ ಮಾಡಲಾಯಿತು.
‘ದಾರಿ ಯಾವುದಯ್ಯ ಅಂಗನವಾಡಿಗೆ’ ಶೀರ್ಷಿಕೆಯಡಿ ಜೂನ್ 11ರಂದು ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಮರು ದಿನ ಭೇಟಿ ನೀಡಿ ಪರಿಶೀಲಿಸಿ ಶಿಥಿಲವಾಗಿದ್ದ ಕಟ್ಟಡ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಅದಂತೆ ಇದೀಗ ಅಂಗನವಾಡಿ ಮಕ್ಕಳು ತೆರಳಲು ತೊಡಕಾಗಿದ್ದ ಮಾರ್ಗವಾಗಿದ್ದ ನಿರುಪಯುಕ್ತವಾಗಿದ್ದ ಸರ್ಕಾರಿ ಶಾಲಾ ಕಟ್ಟಡವನ್ನು ಕಳೆದೆರಡು ದಿನಗಳಿಂದ ಕೆಡವಿ ಸುಲಲಿತವಾಗಿ ಮಕ್ಕಳು ಅಂಗನವಾಡಿಗೆ ಮಕ್ಕಳು ತೆರಳುವ ವ್ಯವಸ್ಥೆ ಮಾಡಲಾಗುತ್ತಿದೆ.