

ತಾಳಿಕೋಟೆ: ಪಟ್ಟಣದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ಬಸ್ ನಿಲ್ದಾಣದ ಮುಂಭಾಗದ ಸಮಗಾರ ಸಮುದಾಯದ ಅಂಗಡಿಗಳನ್ನು ತೆರವುಗೊಳಿಸಿರುವುದು ಸರಿಯಲ್ಲ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಯಲ್ಲಪ್ಪ ಸನಕ್ಯಾನವರ ಹೇಳಿದರು.
ಸ್ಥಳೀಯ ಬಸ್ ನಿಲ್ದಾಣದ ಮುಂಭಾಗದ 23 ಡಬ್ಬಾ ಅಂಗಡಿಕಾರರು ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. 65 ವರ್ಷದಿಂದಲೂ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಲಿಡ್ಕರ್ ಸ್ಕೀಮಿನಲ್ಲಿ ಅಂಗಡಿಗಳನ್ನು ಇಟ್ಟುಕೊಟ್ಟಿದ್ದಾರೆ. ಅಂತಹ ಅಂಗಡಿಗಳನ್ನು ತೆರವುಗೊಳಿಸಲು 15 ದಿನದ ಮುಂಚೆ ನೋಟಿಸ್ ಕೊಡಬೇಕು. ಅವರಿಗೆ ಪರ‌್ಯಾಯ ವ್ಯವಸ್ಥೆ ಮಾಡಿ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ನಿಯಮವಿದೆ ಎಂದರು.
ರಾಜ್ಯ ಸಮಗಾರ ಹರಳಯ್ಯ ಸಂಘದ ಕಾರ್ಯಕಾರಿಣಿ ಸದಸ್ಯ ಅಶೋಕ ಸೌದಾಗರ, ಕರವೇ ಸ್ವಾಭಿಮಾನಿ ಬಳಗದ ಮುಖಂಡ ಜಗದೇಶ ಸೂರ್ಯವಂಶಿ, ಮುಖಂಡರಾದ ವಸಂತ ಮನಗೂಳಿ, ಮುತ್ತಣ್ಣ ಕಬಾಡೆ, ತಾಳಿಕೋಟೆ ಹರಳಯ್ಯ ಸಮಾಜದ ಮುಖಂಡ ರಾಘವೇಂದ್ರ ಬಿಜಾಪೂರ ಮಾತನಾಡಿದರು.
ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಲಾಯಿತು. ಸಿದ್ದರಾಮಪ್ಪ ಹೊನ್ನಮೋರೆ, ಸಾಯಬಣ್ಣ ನಿರಂಜನ, ಮಲ್ಲೇಶಿ ಕಬಾಡೆ, ಶನಶಪ್ಪ ಪಂಡರಪೂರ, ಆನಂದ ಕುಂದರಗಿ, ಲಕ್ಷ್ಮಣ ವಿಜಾಪೂರ, ಕೃಷ್ಣಾ ಮಬ್ರುಮಕರ, ಚಂದ್ರಶೇಖರ ವಿಜಾಪೂರ, ರಾಜು ವಿಜಾಪೂರ, ಕಾಶಿನಾಥ ಮಬ್ರುಮಕರ, ಜಗದೀಶ ವಿಜಾಪೂರ, ಪರಶುರಾಮ ವಿಜಾಪೂರ, ರಾಮಕೃಷ್ಣ ವಿಜಾಪೂರ, ಬಸವರಾಜ ವಿಜಾಪೂರ, ಗೋಪಾಲ ವಿಜಾಪೂರ, ನಾಗರಾಜ ವಿಜಾಪೂರ ಇತರರಿದ್ದರು.