ತಾವರಗೇರಾದಲ್ಲಿ ಶೆಡ್‌ಗಳ ತೆರವು

tvg-1
ತಾವರಗೇರಾ ಬಸ್ ನಿಲ್ದಾಣ ವೃತ್ತದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
Published on

ತಾವರಗೇರಾ: ಪಟ್ಟಣದಲ್ಲಿ ಹೋಟೆಲ್, ಅಂಗಡಿಗಳ ಮಾಲೀಕರು ಹಾಕಿಕೊಂಡಿದ್ದ ಶೆಡ್‌ಗಳನ್ನು ಪೊಲೀಸರ ಸಮ್ಮುಖದಲ್ಲಿ ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಮೂಲಕ ಬುಧವಾರ ತೆರವುಗೊಳಿಸಿದರು.

ಪಟ್ಟಣದ ಬಸ್ ನಿಲ್ದಾಣ, ಸಿಂಧನೂರು ಸರ್ಕಲ್, ವಿವಿಧೆಡೆ ಫುಟ್‌ಪಾತ್ ದಾಟಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಇದರಿಂದ ಪಾದಚಾರಿಗಳಿಗೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಪಪಂ ಆಡಳಿತ ಪೊಲೀಸರ ಸಹಾಯ ಪಡೆದು ಶೆಡ್‌ಗಳನ್ನು ತೆರವುಗೊಳಿಸಿತು.

ಪಿಎಸ್‌ಐ ಚಂದ್ರಪ್ಪ ಎಸ್, ಪಪಂ ಮುಖ್ಯಾಧಿಕಾರಿ ಮಹೇಶ ಅಂಗಡಿ, ಸಿಬ್ಬಂದಿ ಪ್ರಲ್ಲಾದ ಜೋಶಿ, ಶರಣಬಸವ ಸೈಂದರ, ಶ್ಯಾಮೂರ್ತಿ, ಪೊಲೀಸ್ ಸಿಬ್ಬಂದಿ ಶಿವಪುತ್ರಪ್ಪ, ಈರಪ್ಪ, ಬಸವರಾಜ ಇಂಗಳದಾಳ, ಸಿಬ್ಬಂದಿ ತಿಪ್ಪಣ್ಣ ಮರಿಬಸಪ್ಪನವರ, ವೀರೇಶ, ಹನಮಗೌಡ, ಶರಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net