ರಸ್ತೆ ಒತ್ತುವರಿ ತೆರವು

15 web
Published on

ಶ್ರೀನಿವಾಸಪುರ: ತಾಲೂಕಿನ ಓಬೇನಹಳ್ಳಿಯಿಂದ ಗುಂಡಮನತ್ತ ಗ್ರಾಮದವರೆಗೂ ರಸ್ತೆಯನ್ನು ಸರ್ವೇ ಮಾಡಿ, ಒತ್ತುವರಿಯಾಗಿದ್ದ ರಸ್ತೆಯನ್ನು ಶುಕ್ರವಾರ ತೆರವು ಮಾಡಲಾಯಿತು. ಆರ್​ಐ ಮುನಿರೆಡ್ಡಿ ಮಾತನಾಡಿ, ತಾಲೂಕಿನ ಓಬೇನಹಳ್ಳಿಯಿಂದ ಗುಂಡಮನತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಒತ್ತುವರಿಯನ್ನು ತೆರವು ಮಾಡಲಾಗಿದೆ. ಯಾವುದೇ ರೈತರು ತಕರಾರು ಮಾಡದೆ ಜಾಗ ಬಿಟ್ಟುಕೊಟ್ಟಿದ್ದಾರೆ. ಇದೇ ರೀತಿಯಾಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಈಗಾಗಲೇ ಒತ್ತುವರಿ ಕಾಲುವೆ ಕೆರೆ ರಸ್ತೆಗಳನ್ನು ತೆರವು ಮಾಡಿದ್ದೇವೆ. ಸರ್ಕಾರದ ಆದೇಶದಂತೆ ಒತ್ತುವರಿ ರಸ್ತೆಗಳು, ಕಾಲುವೆಗಳು, ಕೆರೆಗಳನ್ನು ತೆರವುಗೊಳಿಸುತ್ತೇವೆ. ಸಾರ್ವಜನಿಕರು ಹಾಗೂ ರೈತರು ಸಹಕಾರ ನೀಡಬೇಕು ಎಂದರು. ಗುಂಡಮನತ್ತ ಗ್ರಾಮದ ಮುಖಂಡ ಕುಬೇರಗೌಡ ಮಾತನಾಡಿ, ನಕಾಶೆ ರಸ್ತೆಯನ್ನುಮಾವಿನ ತೋಟಗಳಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಒತ್ತುವರಿ ರಸ್ತೆಯನ್ನು ತೆರವುಗೊಳಿಸಲು ಗ್ರಾಮಸ್ಥರು ಹಲವು ಬಾರಿ ತಾಲೂಕು ಆಡಳಿತದ ಅಧಿಕಾರಿಗಳಿಗೆ ಮನವಿ ನೀಡಿದ್ದರು. ನಕಾಶೆಯಂತೆ ಕಂದಾಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್​ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿಸಿ ರಸ್ತೆ ಗುರುತಿಸಲಾಗಿದ್ದು, ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದರು. ಈಗಾಗಲೇ ಏನು ಸಮಸ್ಯೆಯಿಲ್ಲದೆ ಸುಸೂತ್ರವಾಗಿ 4 ಕಿಲೋಮೀಟರ್​ ತೆರವುಗೊಳಿಸಲಾಗಿದೆ. ಈ ರಸ್ತೆಯಿಂದ ಹಲವು ವರ್ಷಗಳ ರೈತರ ಕನಸು ನನಸಾಗಿದೆ. ತೋಟಗಳಲ್ಲಿ ರಸ್ತೆಯಾದ ಕಾರಣ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳಿಂದ ತೋಟಗಳಿಗೆ ಹೋಗಲು ಹಾಗೂ ರಸ ಗೊಬ್ಬರಗಳನ್ನ ತೆಗೆದುಕೊಂಡು ಹೋಗಲು ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದ್ದು, ಕೆಲ ರೈತರು ದಾರಿ ಬಿಡದ ಕಾರಣದಿಂದಾಗಿ ವ್ಯವಸಾಯ ಮಾಡದೆ ಜಮೀನುಗಳನ್ನು ಸಹ ಹಾಗೆ ಬಿಡಲಾಗಿತ್ತು. ದೇವಸ್ಥಾನಕ್ಕೂ ದಾರಿ ಇಲ್ಲದೆ ಪರದಾಡುತ್ತಿದ್ದೆವು. ಈ ರಸ್ತೆಯಿಂದಾಗಿ ಅನಕೂಲಗಳಾಗಿದೆ. ರಸ್ತೆ ತೆರವು ಮಾಡಲು ಹೆಬ್ಬಟ ಗ್ರಾಪಂ ಸದಸ್ಯಅನಂತ್​ ರೈತರನ್ನು ಒಮ್ಮತಕ್ಕೆ ಪಡೆದು ಯಾರು ತೊಂದರೆ ಮಾಡದಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net