ಧಾರ್ಮಿಕ ಸಾಮರಸ್ಯ ಬೆಸೆದ ಪೊಲೀಸ್, ಪಾಲಿಕೆ ಅಧಿಕಾರಿಗಳು

20 Dwd 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸೂಪರ್ ಮಾರುಕಟ್ಟೆಯಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸುವಂಥ ಸನ್ನಿವೇಶ ಸೃಷ್ಟಿಯÁಗಿತ್ತು. ಆದರೆ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಇತ್ಯರ್ಥವಾಗಿದೆ.
ಸೂಪರ್ ಮಾರುಕಟ್ಟೆಯಲ್ಲಿ ಪಾಲಿಕೆ ಅಽÃನದ ಪಾರ್ಕಿಂಗ್ ಇದೆ. ಅಲ್ಲಿರುವ 2 ಮರಗಳ ಕೆಳಗೆ ಹನುಮಂತನ ಮೂರ್ತಿ, ಕರಿಯಮ್ಮ ಹಾಗೂ ನಾಗದೇವರ ಮೂರ್ತಿಗಳಿದ್ದು, ಹಲವು ವರ್ಷಗಳಿಂದ ಪೂಜೆ ನಡೆಯುತ್ತ ಬಂದಿದೆ. ಪಕ್ಕದ ಮತ್ತೊಂದು ಮರದ ಕೆಳಗೆ ಮೆಹಬೂಬ ಸುಬಾನಿ ದರ್ಗಾದ ಕಲ್ಲುಗಳನ್ನು ತಂದಿಡಲಾಗಿದೆ. ಮಾಹಿತಿ ತಿಳಿದ ಬಜರಂಗ ದಳ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಉದ್ದೇಶಪೂರ್ವಕವಾಗಿ ಕಲ್ಲುಗಳನ್ನು ತಂದಿಡಲಾಗಿದೆ ಎಂದು ತಕರಾರು ತೆಗೆದರು. ಕೆಲಹೊತ್ತಿನಲ್ಲಿ ಹಿಂದು, ಹಾಗೂ ಮುಸ್ಲಿಂ ಮುಖಂಡರು ಜಮಾ¬ಸಿದ್ದರಿಂದ ಬಿಗುವಿನ ವಾತಾವರಣ ನಿಮÁðಣವಾಗಿತ್ತು.
ಸ್ಥಳಕ್ಕೆ ಎಸಿಪಿ ಪ್ರಶಾಂತ ಸಿದ್ದನಗೌಡರ, ಇನ್‌ಸ್ಪೆಕ್ಟರ್ ಕಾಡದೇವರಮಠ, ಪಾಲಿಕೆ ಸದಸ್ಯ ಶಂಭು ಸಾಲಮನಿ ಹಾಗೂ ಪಾಲಿಕೆ ಅಽಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಜರಂಗ ದಳ ಹಾಗೂ ಪಾಲಿಕೆ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಿಂದು ದೇವರು ಇರುವ ಜಾಗದಲ್ಲಿ ಮುಸ್ಲಿಂ ಸಮುದಾಯದವರು 2- 3 ತಿಂಗಳ ಹಿಂದೆ ದರ್ಗಾದ ಜಾಗ ಎಂದು ಕಲ್ಲು ತಂದಿಟ್ಟಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಪರಿಸ್ಥಿತಿ ಅವಲೋಕಿಸಿದ ಪೊಲೀಸರು ಮತ್ತು ಪಾಲಿಕೆ ಅಽಕಾರಿಗಳು, ಎರಡೂ ಸಮುದಾಯದ ದೇವರ ಕಲ್ಲುಗಳನ್ನು ತೆಗೆದು ಜಾಗವನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಿದರು. ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ದೇವರ ಮೂರ್ತಿಗಳನ್ನು ಅಲ್ಲಿಂದ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net