ಅಪಾಯಕಾರಿ ವಿದ್ಯುತ್ ಕಂಬಗಳ ತೆರವು

mescom
ಅರಸಿನಮಕ್ಕಿ ಶಿಶಿಲ ರಸ್ತೆಯಲ್ಲಿರುವ ಬರ್ಗೋಳ ಸಮೀಪದಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸಲಾಯಿತು
Published on

ಕೊಕ್ಕಡ: ಅರಸಿನಮಕ್ಕಿಯಿಂದ ಶಿಶಿಲ ರಸ್ತೆ ಬದಿಯಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳ ತೆರವು ಕಾರ್ಯವನ್ನು ಬುಧವಾರ ಮೆಸ್ಕಾಂ ಇಲಾಖೆಯವರು ನಡೆಸಿದರು. ಇತ್ತೀಚೆಗೆ ಬರ್ಗುಳದ ಪ್ರತೀಕ್ಷಾ ಶೆಟ್ಟಿ ಸಾವನ್ನಪ್ಪಿರುವುದು ಇಂಥದ್ದೇ ಅಪಾಯಕಾರಿ ವಿದ್ಯುತ್ ಕಂಬಗಳಿಂದ ಎಂದು ಸಾರ್ವಜನಿಕರು ಆರೋಪಿಸಿ ಅಪಾಯಕಾರಿ ಕಂಬಗಳನ್ನು ಬದಲಾಯಿಸಿಕೊಡುವಂತೆ ಒತ್ತಾಯಿಸಿದ್ದರು. ಒಟ್ಟು 15 ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸಾರ್ವಜನಿಕರು ಗುರುತಿಸಿ ಮೆಸ್ಕಾಂ ಇಲಾಖೆಗೆ ತೆರವುಗೊಳಿಸುವಂತೆ ಮನವಿ ಮಾಡಿದ್ದು. ತಕ್ಷಣವೇ ತೆರವುಗೊಳಿಸುತ್ತೆವೆಂದು ಮೆಸ್ಕಾಂ ಇಲಾಖೆಯವರು ಸಾರ್ವಜನಿಕರಿಗೆ ಭರವಸೆ ನೀಡಿದ್ದರು. ಅದರಂತೆ ಈಗ 15 ಕಂಬಗಳು ಸ್ಥಳಾಂತರಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net