ಫುಟ್​ಪಾತ್​ ಒತ್ತುವರಿ ತೆರವು

31 bangarpete 1
ಬಂಗಾರಪೇಟೆ ತಾಲುಕಿನ ಮುಖ್ಯ ಬಜಾರ್​ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ತಳ್ಳೋ ಗಾಡಿ ಅಂಗಡಿಗಳನ್ನು ಹಾಗೂ ಇತರ ವಸ್ತುಗಳನ್ನ ತೆರವುಗೊಳಿಸಿದ ಪುರಸಭೆ ಸಿಬ್ಬಂದಿ.
Published on

ಬಂಗಾರಪೇಟೆ ಪುರಸಭೆಯಿಂದ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ - ತಳ್ಳೋಗಾಡಿ ವಶ

ಬಂಗಾರಪೇಟೆ: ಪಟ್ಟಣದಲ್ಲಿ ಪಾದಚಾರಿಗಳಿಗೆ ಕಂಟಕವಾಗಿದ್ದ ಫುಟ್​ಪಾತ್​ ಒತ್ತುವರಿ ತೆರವು ಕಾರ್ಯಾಚರಣೆಗಿಳಿದ ಪುರಸಭೆ ಅಧ್ಯಕ್ಷ ಗೋವಿಂದ ನೇತೃತ್ವದ ತಂಡ ಗುರುವಾರ ಒತ್ತುವರಿ ತೆರವುಗೊಳಿಸಿ, ಕಾನೂನು ಶಾಸ್ತಿ ಎಚ್ಚರಿಕೆ ನೀಡಿದರು.

ಮುಖ್ಯಬಜಾರ್​ ರಸ್ತೆಯಲ್ಲಿ ುಟ್​ಪಾತ್​ ಮೇಲೆ ವ್ಯಾಪಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪಾದಚಾರಿಗಳು ನಡೆದು ಹೋಗಲು ತೀವ್ರ ಸಮಸ್ಯೆ ಎದುರಿಸಬೇಕಾಗಿತ್ತು. ಹಬ್ಬಗಳ ದಿನಗಳಲ್ಲಿ ಬಜಾರ್​ ರಸ್ತೆ ಕಿಕ್ಕಿರಿದು ತುಂಬಿರುತ್ತದೆ. ಪಾದಚಾರಿಗಳು ವಸ್ತುಗಳನ್ನು ಖರೀದಿಸಲು ಬಜಾರ್​ ರಸ್ತೆಗೆ ಬಂದು ಮನೆಗೆ ವಾಪಸ್​ ಬರುವಷ್ಟರಲ್ಲಿ ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟಾಗಿತ್ತು.

ಪಾದಚಾರಿಗಳಿಗಾಗಿ ಮೀಸಲಿಟ್ಟಿರುವ ುಟ್​ಪಾತ್​ ಮೇಲೆ ವ್ಯಾಪಾರ ನಡೆಸುತ್ತಿದ್ದರೆ, ರಸ್ತೆಯ ಎರಡೂ ಕಡೆ ತಳ್ಳೋಗಾಡಿಗಳು ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರಿಂದ ನಾಗರಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಮಹಿಳೆಯರು, ವೃದ್ಧರು, ಮಕ್ಕಳು ಬಜಾರ್​ ರಸ್ತೆಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಬಂದರೆ ಅಡ್ಡಾದಿಡ್ಡಿಯಾಗಿ ರಸ್ತೆ ಮಧ್ಯೆಯಲ್ಲೇ ನಿಲ್ಲಿಸುವ ತಳ್ಳೋಗಾಡಿಗಳಿಂದ ತಪ್ಪಿಸಿಕೊಂಡು ುಟ್​ಪಾತ್​ ಕಡೆ ಬಂದರೆ ಅಲ್ಲಿಯೂ ಒತ್ತವರಿ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದರು.

ುಟ್​ಪಾತ್​ ಒತ್ತುವರಿ ಹಾಗೂ ರಸ್ತೆಯಲ್ಲಿ ಅಡ್ಡಾದಿಡ್ಡಿ ಯಾಗಿ ನಿಲ್ಲಿಸುವ ತಳ್ಳೋ ಗಾಡಿಗಳಿಂದ ಪಾದಚಾರಿಗಳಿಗೆ ಉಂಟಾಗುತ್ತಿದ್ದ ತೊಂದರೆಗಳ ಬಗ್ಗೆ ಪುರಸಭೆ ಆಡಳಿತ ಮಂಡಳಿಗೆ ನಾಗರಿಕರು ನೀಡಿದ್ದ ದೂರುಗಳ ಹಿನ್ನೆಲೆಯಲ್ಲಿ ಈಗಾಗಲೇ ಮೂರು ಬಾರಿ ುಟ್​ ಪಾತ್​ ತೆರವಿಗೆ ಪುರಸಭೆ ಕ್ರಮ ಕೈಗೊಂಡಿತ್ತು. ತಳ್ಳೋಗಾಡಿಗಳು, ರಸ್ತೆಗೆ ಚಾಚಿಕೊಂಡಿದ್ದ ಟಾಪ್​ಗಳನ್ನು ತೆರುವುಗೊಳಿಸುವ ಕಾರ್ಯಾಚರಣೆ ನಡೆದಿತ್ತು. ಆದರೆ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಪಾದಚಾರಿಗಳು ಪುಟ್​ಪಾತ್​ ಒತ್ತುವರಿ, ತಳ್ಳೋ ಗಾಡಿಗಳಿಂದ ಮಾಮೂಲಿಯಂತೆ ಸಮಸ್ಯೆ ಉದ್ಬವಗೊಂಡಿತ್ತು. ಇದರಿಂದ ಪಾದಚಾರಿಗಳು ಕಿರಿಕಿರಿ ಅನುಭವಿಸುವಂತೆ ಮಾಡಿತ್ತು.

ಈ ಬಾರಿ ತೆರುವು ಕಾರ್ಯಾಚರಣೆಯಲ್ಲಿ ಮುಲಾಜಿಲ್ಲದೆ ಪುಟ್​ ಪಾತ್​ ತೆರುವಿಗೆ ಫುರಸಭೆ ಕಟ್ಟುನಿಟ್ಟಿನ ಕ್ರಮದಿಂದ ಕಾರ್ಯಾಚರಣೆಗೆ ಇಳಿದಿದ್ದು, ಅಂಗಡಿಗಳು ಮತ್ತು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸುತ್ತಿದ್ದ ತಳ್ಳೋಗಾಡಿಗಳು ಮತ್ತು ರಸ್ತೆಯಲ್ಲೇ ಟೇಬಲ್​ ಹಾಕಿಕೊಂಡು ರಾಜಾರೋಷವಾಗಿ ವ್ಯಾಪಾರ ನಡೆಸುತ್ತಿದ್ದ ಎಲ್ಲ ವಸ್ತುಗಳನ್ನು ಸಿಬ್ಬಂದಿ ತೆರುವುಗೊಳಿಸಿ ಟ್ರ್ಯಾಕ್ಟರ್​ಗೆ ತುಂಬಿಸಿ, ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಬಡಾವಣೆ ಗೇಟ್​ ತೆರವುಗೊಳಿಸಲಿ

ಪಟ್ಟಣದ ಹಲವು ಬಡಾವಣೆಯಲ್ಲಿ ಸ್ಥಳಿಯರೆಲ್ಲರೂ ಸೇರಿ ತಮ್ಮ ತಮ್ಮ ರಸ್ತೆಗೆ ಪ್ರತ್ಯೇಕ ಗೇಟ್​ ಮಾಡಿಕೊಂಡಿದ್ದು, ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಪುರಸಭೆ ಅಧಿಕಾರಿಗಳು ಕೆಲ ಗೇಟ್​ಗಳನ್ನು ತೆರವುಗೊಳಿಸಿ ಎಚ್ಚರಿಕೆ ನೀಡಿದ್ದು, ಪಟ್ಟಣದಲ್ಲಿ ಇನ್ನೂ ಅನೇಕ ಸಾರ್ವಜನಿಕ ರಸ್ತೆಗೆ ಅಳವಡಿಸಿದ ಖಾಸಗಿ ಗೇಟ್​ಗಳನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಉಸಿರಾಟ ಸಮಸ್ಯೆಯಿಂದ ಅಧಿಕಾರಿ ಸಾವು

ಬೆಳಗ್ಗೆ ಪಟ್ಟಣದ ುಟ್​ಪಾತ್​ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾದ ನಂತರ ಕೋಲಾರದ ಜಿಲ್ಲಾಧಿಕಾರಿ ಭವನದ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಬಂಗಾರಪೇಟೆ ಪುರಸಭೆ ಆರೋಗ್ಯ ನಿರೀಕ್ಷಕ ಗೋವಿಂದರಾಜ್​ ಅವರು (52) ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು, ವಾಪಸ್​ ಬಂಗಾರಪೇಟೆಗೆ ಬಂದಿದ್ದರು. ಸಂಜೆ ಮತ್ತೆ ಉಸಿರಾಟ ಸಮಸ್ಯೆಯಿಂದ ಬಂಗಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿಂದ ಪುನ@ ಕೋಲಾರ ಎಸ್​ಎನ್​ಆರ್​ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಸಂಜೆ ಮೃತರಾದರು. ಮೃತರಿಗೆ ಪತ್ನಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net