

ಚಿಕ್ಕಮಗಳೂರು: ನಗರ ಭಾಗದ ಅಂಗಡಿಮುAಗಟ್ಟುಗಳ ಆಂಗ್ಲಭಾಷೆಯ ನಾಮಫಲಕ ತೆರವುಗೊಳಿಸಬೇಕು ಹಾಗೂ ಮೂಲ ಸೌಕರ್ಯಗಳನ್ನು ಸಮಪರ್ಕವಾಗಿ ಒದಗಿಸಿಕೊಡಬೇಕು ಎಂದು ಕನ್ನಡ ಸೇನೆ ಮುಖಂಡರುಗಳು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಅವರನ್ನು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಆಂಗ್ಲಭಾಷೆ ನಾಮಫಲಕ ತೆರವು ಸಂಬAಧ ಕನ್ನಡಪರ ಸಂಘಟನೆಗಳು ಹೋರಾಡಿದ ಪರಿಶ್ರಮದಿಂದ ಕನ್ನಡ ನಾಮಫಲಕಕ್ಕೆ ಪ್ರಾಮುಖ್ಯತೆ ಸಿಕ್ಕಿದೆ. ಇದನ್ನು ಲೆಕ್ಕಿಸದೇ ಪ್ರಮುಖ ಬೀದಿಗಳಲ್ಲಿ ಆಂಗ್ಲಭಾಷೆ ನಾಮಫಲಕ ಇಂದಿಗೂ ಹಾಗೇ ಉಳಿದುಕೊಂಡಿವೆ ಎಂದು ದೂರಿದರು.
ಕನ್ನಡ ಭಾಷೆಯ ಇತಿಹಾಸ ಅರಿತು ಜಿಲ್ಲೆಯ ಜನತೆ ಸ್ವಯಂಪ್ರೇರಿತರಾಗಿ ಹೆಚ್ಚು ಪ್ರಮಾಣದಲ್ಲಿ ಕನ್ನಡ ಪದಗಳನ್ನು ಫಲಕದಲ್ಲಿ ಬಳಸಬೇಕು. ಇದನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟುದಾರರು ವ್ಯಾಪಾರಕ್ಕೆ ಮುಂದಾದರೆ ಫಲಕಗಳಿಗೆ ಮಸಿ ಬಳೆಯುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ನಗರದ ಕೆಲವು ವಾರ್ಡ್ಗಳಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆಲ್ಲ ನೀರು ಹರಿದು ಜನ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಸಂಬAಧಿಸಿದ ನಗರಸಭಾ ಸದಸ್ಯರು ಈ ಬಗ್ಗೆ ಗಮನಹರಿಸಬೇಕು. ಜೊತೆಗೆ ಮಳೆ ಹೆಚ್ಚಿರುವ ಕಾರಣ ತಗ್ಗು ಪ್ರದೇಶಗಳ ಚರಂಡಿ ನೀರು ಒಂದೆಡೆ ಶೇಖರಣೆಗೊಳ್ಳುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಗರದ ಪ್ರಮುಖ ಪಾರ್ಕ್ಗಳಲ್ಲಿ ಗಿಡ-ಗಂಟಿಗಳು ಹೆಚ್ಚಿವೆ ಹಾಗೂ ಸ್ವಚ್ಚತೆ ಇಲ್ಲದೇ ಮರುಗುತ್ತಿದೆ. ಈ ಬಗ್ಗೆ ಪೌರಾಯುಕ್ತರು ಉದ್ಯಾನವನ ಪರಿಶೀಲಿಸಿ ಸ್ವಚ್ಚಗೆ ಕ್ರಮ ವಹಿಸಬೇಕು. ಆಸನದ ವ್ಯವಸ್ಥೆ, ಪರಿಸರಕ್ಕೆ ಪೂರಕವಾದ ಸಸಿಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಬೇಕು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು ಸೂಕ್ತವಾಗಿ ಸ್ಪಂದಿಸಲಾಗುವುದು ಭರವಸೆ ಎಂದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡರಾದ ಅಜಯ್, ಸತೀಶ್, ಅನ್ವರ್, ಚೇತನ್, ಪ್ರದೀಪ್, ಸಂಜೀವಶೆಟ್ಟಿ, ಮಹೇಶ್, ಸಂತೋಷ್, ರಂಗನಾಥ್, ಅಶೋಕ್, ಜಮೀರ್ ಮತ್ತಿತರಿದ್ದರು.