76 ಕೆರೆಗಳ ಒತ್ತುವರಿ ತೆರವು

21Kgfph-1
ಕೆಜಿಎಫ್​ ನಗರದ ತಾಲೂಕು ಆಡಳಿತ ಸೌಧಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಮಾತನಾಡಿದರು. ತಹಸೀಲ್ದಾರ್​ ನಾಗವೇಣಿ, ಶಿರಸ್ತೇದಾರ್​ ಮಂಜುನಾಥ್​, ಕಂದಾಯ ನಿರೀಕ್ಷಕ ಮುನಿವೆಂಕಟಸ್ವಾಮಿ, ಚಂದ್ರಮೋಹನ್​ ಇದ್ದರು.
Published on

ಡಿಸಿ ಡಾ.ರವಿ ಮಾಹಿತಿ - ಕೆಜಿಎಫ್ ತಾಲೂಕಿನಲ್ಲಿನ ಜಾತಿ ಸಮೀಕ್ಷೆ ಪರಿಶೀಲನೆ

ಕೆಜಿಎಫ್​: ತಾಲೂಕಿನಾದ್ಯಂತ 315 ಕೆರೆಗಳಿದ್ದು, ಈಗಾಗಲೇ 118 ಕೆರೆಗಳನ್ನು ಸರ್ವೇ ಮಾಡಿ 76 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಮುಂದಿನ 4 ದಿನಗಳಲ್ಲಿ ಇನ್ನೂ 100 ಕೆರೆಗಳ ಸರ್ವೇ ನಡೆಸಿ, ಒತ್ತುವರಿಯಾಗಿದ್ದರೆ ಮುಲಾಜಿಲ್ಲದೇ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಹೇಳಿದರು.

ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಜಾತಿ ಸಮೀಕ್ಷೆ ಒಳಗೊಂಡಂತೆ ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣ ಹಾಗೂ ಭೂಮಿ ತಂತ್ರಾಂಶದ ಕುರಿತ ಪ್ರಗತಿ ಪರಿಶೀಲನೆ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆರೆಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಒತ್ತುವರಿಯಾಗಿರುವ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಿ, ಒತ್ತುವರಿ ತೆರವುಗೊಳಿಸಲಾಗುವುದು ಎಂದರು.

ತಾಲೂಕಿನಾದ್ಯಂತ ಇದುವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚಿನ ಅರ್ಜಿದಾರರು ದರಖಾಸ್ತು ಮೂಲಕ ಮಂಜೂರಾಗಿರುವ ಜಮೀನುಗಳ ಖಾತೆಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮಾನದಂಡಗಳಂತೆ ಬೇರೆಬೇರೆ ಕಾರಣಗಳಿಂದ ಹಲವು ಅರ್ಜಿಗಳು ತಿರಸತಗೊಂಡು, 52 ರೈತರ ಅರ್ಜಿಗಳು ಮಾತ್ರ ಅರ್ಹಗೊಂಡಿವೆ. ಅವುಗಳನ್ನು ಪರಿಶೀಲನೆ ಮಾಡಿ, ಅರ್ಜಿದಾರ ಲಾನುಭವಿಗಳ ಹೆಸರಿಗೆ ಆರ್​ಟಿಸಿ ಮಾಡಲಾಗುವುದು

ಎಂದು ಡಿಸಿ ಹೇಳಿದರು.

ಹೆಚ್ಚು ಶುಲ್ಕ ವಸೂಲಿ ಮಾಡಿದರೆ ಶಾಲೆಗಳ ಮಾನ್ಯತೆ ರದ್ದು: ನಗರದ ಕೆಲ ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಮತ್ತು ಸಮವಸ್ತ್ರ, ಪಠ್ಯಪುಸ್ತಕ, ನೋಟ್​ ಪುಸ್ತಕಗಳನ್ನು ಶಾಲೆಯಲ್ಲಿಯೇ ಖರೀದಿ ಮಾಡುತ್ತಿರುವುದರ ಬಗ್ಗೆ ಬಿಇಒ ಮತ್ತು ಡಿಡಿಪಿಐ ವರದಿ ಸಲ್ಲಿಸಿದರೆ ಅಂತಹ ಶಾಲೆಗಳ ಮಾನ್ಯತೆ ರದ್ದುಪಡಿಸಿ, ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಸಿದರು. ನಗರ ಪ್ರದೇಶ ಹಾಗೂ ನಗರ ಹೊರವಲಯದ ಖಾಸಗಿ ಶಾಲೆ&ಕಾಲೇಜುಗಳಿಗೆ ಮಕ್ಕಳನ್ನು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದರ ಬಗ್ಗೆ ಪ್ರತಿಸಿದ ಡಿಸಿ, ಈಗಾಗಲೇ ಟ್ರಾನ್ಸ್​ಪೋರ್ಟ್​ ಕಮಿಟಿ ಸಭೆಯಲ್ಲಿ ಈ ವಿಚಾರದ ಚರ್ಚೆಯಾಗಿದ್ದು, ಸಭೆಯಲ್ಲಿ ಹಾಜರಿದ್ದ ಖಾಸಗಿ ವಾಹನಗಳ ಮಾಲೀಕರು, ಆಟೋ ಚಾಲಕರ ಸಂಘಟನೆಗಳು ಮತ್ತು ಟ್ರಕ್​ನವರಿಗೆ ಓವರ್​ಲೋಡ್​ ಮಾಡಿಕೊಂಡು ಹೋಗಬಾರದು ಎಂದು ಸೂಚಿಸಿ, ಆರ್​ಟಿಒ ಮತ್ತು ಸ್ಥಳಿಯ ಎಆರ್​ಟಿಒಗಳಿಗೆ ಸಿಬ್ಬಂದಿ ಎಂಬ ಸಬೂಬು ನೀಡಿದರೆ ಆಗುವುದಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಶಾಲೆ ಪ್ರಾರಂಭವಾಗುವ ಮತ್ತು ಮುಕ್ತಾಯವಾಗುವ ಸಮಯಕ್ಕೆ ಹೋಗಿ ಆಗಿಂದ್ದಾಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಡಿಸಿ ತಿಳಿಸಿದರು.

ಅಕ್ರಮ ಕಲ್ಲುಕ್ವಾರಿಗಳ ವಿರುದ್ಧ ಕ್ರಮ

ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದರ ಬಗ್ಗೆ ಕೆಲ ದಿನಗಳ ಹಿಂದೆ ಉಪ ಲೋಕಾಯುಕ್ತ ನ್ಯಾಯಾಧೀಶರು ಜಿಲ್ಲೆಯ ಮಾಲೂರು ತಾಲೂಕಿಗೆ ಭೇಟಿ ನೀಡಿದ್ದಾಗ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ, ಮಾಲೂರು ತಾಲೂಕಿನಲ್ಲಿನ ಎಲ್ಲ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅದೇ ರೀತಿಯಲ್ಲಿ ಸುರಕ್ಷಾ ಕ್ರಮಗಳನ್ನು ಪಾಲಿಸದೇ ಗಣಿಗಾರಿಕೆ ನಡೆಯುವುದರ ಬಗ್ಗೆ ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಡಿಸಿ ಹೇಳಿದರು.

ಮಿಸ್ಸಿಂಗ್​  ಫೈಲ್​ ಕಮಿಟಿ ರಚನೆ

ಕೆಲ ಸಂದರ್ಭಗಳಲ್ಲಿ ಮೂಲ ಕಡತಗಳು ನಾಪತ್ತೆಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತಹ ಕಡತಗಳನ್ನು ರೀಬಿಲ್ಡ್​ ಮಾಡಲು ಅವಕಾಶವಿದ್ದು, ಕಡತಗಳ ನೈಜತೆ ಪರಿಶೀಲನೆಗೆ ನನ್ನ ಅಧ್ಯಕ್ಷತೆಯಲ್ಲಿಯೇ ಮಿಸ್ಸಿಂಗ್ ​ಫೈಲ್​ ಕಮಿಟಿ ರಚಿಸಲಾಗಿದೆ. ಕಡತಗಳ ಬಗ್ಗೆ ತಹಸೀಲ್ದಾರ್​ರು ಕಮಿಟಿಯಲ್ಲಿ ಮಾಹಿತಿ ಸಲ್ಲಿಸಿದರೆ, ಪರಿಶೀಲನೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಡಿಸಿ ರವಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net