ಬಿಳಿಯೂರು ಅಣೆಕಟ್ಟು ಗೇಟು ತೆರವು

New Project (15)
Published on

ಉಪ್ಪಿನಂಗಡಿ: ಅಕಾಲಿಕ ಮಳೆಯಿಂದಾಗಿ ನದಿ ನೀರಿನ ಹರಿಯುವಿಕೆಯಲ್ಲಿ ಗಣನೀಯ ಹೆಚ್ಚಳವುಂಟಾಗಿ ನೇತ್ರಾವತಿ ನದಿಗೆ ಬಿಳಿಯೂರಿನಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಗೇಟು ತೆರವು ಕಾರ್ಯಾಚರಣೆಯಲ್ಲಿ ಆಗಿದ್ದ ತೊಡಕು ನಿವಾರಿಸಲಾಗಿದ್ದು, ಎಲ್ಲ 42 ಗೇಟುಗಳನ್ನು ತೆರವುಗೊಳಿಸಿ ನದಿಯನ್ನು ಸಹಜ ಹರಿಯುವಿಕೆಗೆ ಒಳಪಡಿಸಲಾಗಿದೆ.

ಪರಿಸರಾದ್ಯಂತ ಮಳೆ ಸುರಿದು ನದಿ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಅಣೆಕಟ್ಟಿನ ಗೇಟು ತೆರವು ಮಾಡಲು ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆಯೇ ಬಿರುಸು ಪಡೆದ ಮಳೆಯಿಂದಾಗಿ ನದಿ ಮೈದುಂಬಿ ಹರಿಯಲಾರಂಭಿಸಿತ್ತು. ಆ ವೇಳೆ 9 ಗೇಟುಗಳನ್ನು ಪೂರ್ಣ ಪ್ರಮಾಣದಲ್ಲಿ ಮತ್ತು ಆರು ಗೇಟುಗಳನ್ನು ಅಲ್ಪ ಪ್ರಮಾಣದಲ್ಲಿ ತೆರವು ಮಾಡಲಾಗಿತ್ತಾದರೂ ನದಿ ನೀರಿನ ಪ್ರವಾಹಕ್ಕೆ ಉಳಿದ ಗೇಟುಗಳ ತೆರವು ಕಾರ್ಯಾಚರಣೆಗೆ ಅಡೆತಡೆಯುಂಟಾಗಿತ್ತು. ನದಿಯಲ್ಲಿ ಮರದ ದಿಮ್ಮಿಗಳು ಮತ್ತು ಕಸಕಡ್ಡಿಗಳು ಯಥೇಚ್ಛ ಪ್ರಮಾಣದಲ್ಲಿ ಹರಿದು ಬಂದು ಅಣೆಕಟ್ಟಿನ ಗೇಟುಗಳಲ್ಲಿ ಸಿಲುಕಿಕೊಂಡಿತ್ತು. ಈ ಎಲ್ಲ ಸೂಕ್ಷ್ಮತೆಯ ನಡುವೆ ಗೇಟು ತೆರವು ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬುಧವಾರ ಸಾಯಂಕಾಲ ವೇಳೆಗೆ ಎಲ್ಲ ಗೇಟುಗಳನ್ನು ಸುರಕ್ಷಿತವಾಗಿ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net