ಮೇಲ್ಸೇತುವೆ ನಿರ್ಮಿಸಲು ಮನೆ ತೆರವುಗೊಳಿಸಿ

oplus_4194304
oplus_4194304
Published on

ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಸೂಚನೆ | ಉರಿಗಾಂ ರೈಲ್ವೆ ಮೇಲ್ಸೇತುವೆ ನಿಮಾರ್ಣ ಕಾರ್ಯಕ್ಕೆ ಅಡ್ಡಿ

ಕೆಜಿಎಫ್​: ನೀವು ವಾಸ ಮಾಡುತ್ತಿರುವುದು ಚಿನ್ನದ ಗಣಿ ಭೂಮಿಯಲ್ಲಿ, ನಿಮ್ಮ ಪೂರ್ವಜರು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಲ್ಲಿಯೇ ಮನೆಗಳನ್ನು ನಿಮಾರ್ಣ ಮಾಡಿದ್ದಾರೆ. ನೀವು ವಾಸ ಮಾಡುತ್ತಿರುವ ಮನೆಗಳು ನಿಮ್ಮದು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಶ್ರೀ ಮನೆಗಳನ್ನು ಖಾಲಿ ಮಾಡಿ ಮೇಲ್ಸೇತುವೆ ನಿರ್ರ್ಮಾಣಕ್ಕೆ ಅನುವು ಮಾಡಕೊಡಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಹೇಳಿದರು.

ನಗರದ ಉರಿಗಾಂ ರೈಲ್ವೆ ಮೇಲ್ಸೇತುವೆ ನಿಮಾರ್ಣ ಕಾರ್ಯಕ್ಕೆ ಅಡ್ಡಿಯಾಗಿರುವ ಮನೆಗಳ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಇದೇ ಜಾಗದಲ್ಲಿ ರೈಲ್ವೆ ಮೇಲ್ಸೇತುವೆ ಬರಲಿದ್ದು, ನೀವು ನಿಮ್ಮ ಮನೆಗಳನ್ನು ಖಾಲಿ ಮಾಡಿ, ರೈಲ್ವೆ ಮೇಲತ್ಸುವೆ ನಿಮಾರ್ಣಕ್ಕೆ ಸಹಕಾರ ನೀಡಬೇಕು ಎಂದು ನಿವಾಸಿಗಳ ಮನವೊಲಿಸಲು ಯತ್ನಿಸಿದರು.

ಕೇಂದ್ರ ಸರ್ಕಾರದ ಒಡೆತನದ ಬಿಜಿಎಂಎಲ್​ ಭೂಮಿಯಲ್ಲಿ ನೀವು ಅನಧಿಕೃತವಾಗಿ ವಾಸ ಮಾಡುತ್ತಿದ್ದು, ಚಿನ್ನದ ಗಣಿ ಅಧಿಕಾರಿಗಳು ನೀವು ವಾಸ ಮಾಡುವುದಕ್ಕೆ ಪರ್ಯಾಯ ಜಾಗದಲ್ಲಿ ಮನೆಗಳ ವ್ಯವಸ್ಥೆ ಮಾಡಲಿದ್ದಾರೆ, ಒಂದೆರಡು ತಿಂಗಳಲ್ಲಿ ಮನೆಗಳನ್ನು ಖಾಲಿ ಮಾಡಲು ತಿಳಿಸಿದರು.

ನಗರದ ಸ್ವರ್ಣಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಚಿನ್ನದ ಗಣಿಗಳ ವಿಶೇಷ ಅಧಿಕಾರಿ ಅಮೀತ್​ ಮಾತನಾಡಿ , ಉರಿಗಾಂ ರೈಲ್ವೆ ನಿಲ್ದಾಣದ ಬಳಿಯ 4.13 ಎಕರೆಯನ್ನು ಇಲ್ಲಿನ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಲೋಕೋಪಯೋಗಿ ಇಲಾಖೆಗೆ ನೀಡಬೇಕು. ಇಲ್ಲಿ ಮನೆ ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಚಿನ್ನದ ಗಣಿ ಅಧಿಕಾರಿಗಳಿಗೆ ಸೂಚಿಸಿದರು.

2012 ರಲ್ಲಿ 900 ಮೀ. ಮೇಲತ್ಸುವೆ ನಿಮಾರ್ಣಕ್ಕೆ 30 ಕೋಟಿ ರೂ. ನೀಲಿ ನಕ್ಷೆ ಸಿದ್ಧಪಡಿಸಿ ಟೆಂಡರ್​ ಕರೆಯಲು ರೈಲ್ವೆ ಇಲಾಖೆ ಅನುಮತಿ ನೀಡಿತ್ತು. ರೈಲ್ವೆ ಇಲಾಖೆಗೆ ಅಗತ್ಯವಿರುವ 4.13 ಎಕರೆ ಭೂಮಿಯ ಒತ್ತವರಿ ತೆರವುಗೊಳಿಸದೆ ಇದ್ದುದರಿಂದ ಕಳೆದ 12 ವರ್ಷಗಳಿಂದ ಕಾಮಗಾರಿ ಕುಂಠಿತಗೊಂಡಿತ್ತು ಎಂದರು.

ರೈಲ್ವೆ ಇಲಾಖೆಯ ಇಂಜಿನಿಯರ್​ ಬಾಲಕೃಷ್ಣ, ಮುರಳೀಧರ್​, ಲೋಕೊಪಯೋಗಿ ಇಲಾಖೆ ಇಇ ರಾಮಮೂರ್ತಿ, ಕೆಜಿಎಫ್​ ಎಇಇ ರಾಜಶೇಖರ್​, ತಹಸೀಲ್ದಾರ್​ಗಳಾದ ಭರತ್​, ನಾಗವೇಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net