ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

2222
Published on

ಕೆಜಿಎಫ್​: ಉರಿಗಾಂಪೇಟೆಯಲ್ಲಿ ನಿಮಾರ್ಣವಾಗಿರುವ ಮಝ್ದಾ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ಶಾಸಕರಿಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಶಾಸಕಿ ಎಂ.ರೂಪಕಲಾ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆ ಸಾರ್ವಜನಿಕರ ಒತ್ತಡದ ಮೇರೆಗೆ ತೆರವುಗೊಳಿಸಿದ್ದ ರಾಜ ಕಾಲುವೆ ಭಾಗಶ@ ಮುಚ್ಚಿಹೋಗಿರುವುದನ್ನು ನೋಡಿ ನಗರಸಭೆ ಅಧಿಕಾರಿಗಳ ಬಗ್ಗೆ ಅಸಮಾಧಾನಗೊಂಡರು. ಯಾವ ಒತ್ತಡಕ್ಕೆ ಮಣಿದು ರಾಜಕಾಲುವೆ ಮುಚ್ಚಿಹೋಗಿರುವುದನ್ನು ನೋಡಿಕೊಂಡು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಮುಚ್ಚಿಹೋಗಿರುವ ರಾಜಕಾಲುವೆಯನ್ನು ಗುರುತಿಸಿ ಕೂಡಲೆ ತೆರವುಗೊಳಿಸಲು ಪೌರಾಯುಕ್ತರಿಗೆ ಹಾಗೂ ತಹಸೀಲ್ದಾರ್​ಗೆ ಸೂಚಿಸಿದರು. ಬಡಾವಣೆ ನಿಮಾರ್ಣ ಮಾಡುವಾಗ ಎಲ್ಲ ರೀತಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಬಡಾವಣೆಯ ಮಾಲೀಕರಿಗೂ ತಿಳಿಸಿದರು. ಪೌರಾಯುಕ್ತರು ಪವನ್​ ಕುಮಾರ್​, ನಗರಸಭೆ ಎಇಇ ಮಂಜುನಾಥ್​, ನಗರಸಭೆ ಸದಸ್ಯ ಮೋಹನರಾಜ್​, ಮುಖಂಡರಾದ ಶ್ರೀನಿವಾಸನ್​, ಮುಕುಂದ್​, ವಿನೋದ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net