ದುಗ್ಗಹಳ್ಳಿ ದೊಡ್ಡ ಕೆರೆ ಒತ್ತುವರಿ ತೆರವುಗೊಳಿಸಿ

ದುಗ್ಗಹಳ್ಳಿ ದೊಡ್ಡ ಕೆರೆ ಒತ್ತುವರಿ ತೆರವುಗೊಳಿಸಿ
Published on

ನಂಜನಗೂಡು: ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿರುವ ದೊಡ್ಡ ಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಶೀಘ್ರ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮೂಹಿಕ ನಾಯಕತ್ವ ರಾಜ್ಯ ರೈತ ಸಂಘದ ಮುಖಂಡ ದುಗ್ಗಹಳ್ಳಿ ಸತೀಶ್ ಎಚ್ಚರಿಕೆ ನೀಡಿದ್ದಾರೆ.

ಹುಲ್ಲಹಳ್ಳಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಸುಮಾರು 24 ಎಕರೆ ವಿಸ್ತೀರ್ಣದಲ್ಲಿ ದೊಡ್ಡ ಕೆರೆಯೊಂದಿದೆ. ಹಲವು ವರ್ಷಗಳಿಂದಲೂ ಗ್ರಾಮದವರಲ್ಲದ ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮದ ನಕಾಶೆಯಲ್ಲೂ ಕೆರೆಯ ಬಗ್ಗೆ ನಮೂದಾಗಿದೆ. ಈ ಬಗ್ಗೆ ತಹಸೀಲ್ದಾರ್ ಕಚೇರಿಗೂ ದೂರು ನೀಡಲಾಗಿದ್ದು, ಇದುವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ, ಅಂತರ್ಜಲ ಅಭಿವೃದ್ಧಿಯ ದೃಷ್ಟಿಯಿಂದ ಒತ್ತುವರಿ ಕೆರೆಯ ಜಾಗವನ್ನು ತೆರವುಗೊಳಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ಶಿವಕುಮಾರ್, ಎಚ್.ಸಿ.ಚಿನ್ನಯ್ಯ, ಕೇಬಲ್ ಬಸಪ್ಪ, ಬಸವಣ್ಣ, ರತ್ನಮ್ಮ, ಹೇಮಾ, ಗೀತಾ, ಮಹೇಶ್, ಶಿವಣ್ಣ, ಕೆಂಪಯ್ಯ, ಸೋಮಣ್ಣ, ನಂದಿ, ಸಿದ್ದರಾಜು, ಮಹದೇವಪ್ಪ, ಶಾಂತಪ್ಪ, ಧರ್ಮೇಂದ್ರ, ಸುರೇಶ್, ಭಕ್ತವತ್ಸಲ, ಮಹೇಶ್, ಪ್ರಕಾಶ್, ಮಾದಪ್ಪ, ಬಸವಣ್ಣ, ಸುರೇಶ್, ಪಾಪಣ್ಣ, ಚಾಮುಂಡಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net