ವಿದ್ಯುತ್ ಕಂಬ ತೆರವು ಮಾಡಿ

Clear the electric pole
ಗುಳೇದಗುಡ್ಡ ಪಟ್ಟಣದ ಹೆಸ್ಕಾಂ ಕಚೇರಿ ಎಇಇ ಪ್ರಕಾಶ ಪೋಚಗುಂಡಿ ಅವರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಅಶೋಕ ಹೆಗಡೆ, ಪ್ರಕಾಶ ಮುರುಗೋಡ, ರಾಚಪ್ಪ ಸರಂಗಿ, ಬಾಳು ನಿರಂಜನ, ಮಂಜುನಾಥ ರಾಜನಾಳ ಇತರರಿದ್ದರು.
Published on


ಗುಳೇದಗುಡ್ಡ: ಪಟ್ಟಣದ ಕಮತಗಿ ನಾಕಾ ಬಳಿ ರಸ್ತೆ ಕಾಮಗಾರಿ ನಡೆದಿದ್ದು, ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕೆಂದು ಪಟ್ಟಣದ ನಾಗರಿಕರು ಹೆಸ್ಕಾಂ ಅಧಿಕಾರಿಗಳಿಗೆ ಆಗ್ರಹಿಸಿದರು.

ಪಟ್ಟಣದ ಹೆಸ್ಕಾಂ ಕಚೇರಿಗೆ ಬುಧವಾರ ತೆರಳಿದ ಸಾರ್ವಜನಿಕರು ಎಇಇಗೆ ಮನವಿ ಸಲ್ಲಿಸಿದರು. ಬಹಳ ದಿನಗಳ ಬಳಿಕ ರಸ್ತೆ ಕಾಮಗಾರಿ ನಡೆದಿದೆ. ಗುಲಾಬ್ ಥೇಟರ್‌ದಿಂದ ಕಮತಗಿ ನಾಕಾವರೆಗೆ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಬೇಕು. ರಸ್ತೆ ಕಾಮಗಾರಿ ಕಳೆದ ಮೂರು ದಿನಗಳಿಂದ ನಿಂತಿದ್ದು, ಹೆಸ್ಕಾಂ ಅಧಿಕಾರಿಗಳು ಕೂಡಲೇ ವಿದ್ಯುತ್ ಕಂಬಗಳನ್ನು ತೀವ್ರಗತಿಯಲ್ಲಿ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಬೇಕು ಎಂದರು.

ಹೆಸ್ಕಾಂ ಎಇಇ ಪ್ರಕಾಶ ಪೋಚಗುಂಡಿ ಮನವಿ ಸ್ವೀಕರಿಸಿ ಮಾತನಾಡಿ, ಲೋಕೋಪಯೋಗಿ ಇಲಾಖೆಗೆ ವಿದ್ಯುತ್ ಕಂಬದ ಎಸ್ಟಿಮೇಟ್ ಕಳಿಸಲಾಗುವುದು. ಶೀಘ್ರದಲ್ಲಿ ಕಂಬ ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಾಮಾಜಿಕ ಹೋರಾಟಗಾರ ಅಶೋಕ ಹೆಗಡೆ, ಪ್ರಕಾಶ ಮುರುಗೋಡ, ರಾಚಪ್ಪ ಸರಂಗಿ, ಬಾಳು ನಿರಂಜನ, ಮಂಜುನಾಥ ರಾಜನಾಳ, ರವಿ ಅಂಗಡಿ, ಈರಣ್ಣ ಗಂಜಾಳ, ಬಸು ತೊಗರಿ, ಮೆಹಬೂಬ್ ದೊಟೆಗಾರ, ವಿಶ್ವನಾಥ ತೊಗರಿ, ದಾನಪ್ಪ ದಸಮನಿ, ಈಶ್ವರ ರಾಜನಾಳ, ಮಹೇಶ ಶಿವರಾತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net