ಜಿಲ್ಲಾದ್ಯಂತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

6, srinivaspur photo -2
Published on

ಶ್ರೀನಿವಾಸಪುರ: ಜಿಲ್ಲಾದ್ಯಂತ ಮರೆಯಾದ ರಾಜಕಾಲುವೆ ಹಾಗೂ ಸ್ಮಶಾನ ಬಂಡಿದಾರಿಗಳನ್ನು ಗುರುತಿಸಿ, ಮುಂಗಾರು ಮಳೆಯಿಂದ ರೈತರ ಬೆಳೆ ರಕ್ಷಣೆ ಮಾಡಬೇಕು ಎಂದು ರೈತ ಸಂಘದ ಸಂಚಾಲಕ ಬಂಗವಾದಿ ನಾಗರಾಜ್​ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಜಿಲ್ಲಾದ್ಯಂತ ಒತ್ತುವರಿಯಾದ ರಾಜಕಾಲುವೆಗಳನ್ನು ಗುರುತಿಸಿ ಒತ್ತುವರಿ ತೆರವುಗೊಳಿಸಬೇಕು. ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲೆಯ ಎಲ್ಲ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿ ವರ್ಷ ಮುಂಗಾರುಮಳೆ ಸೃಷ್ಟಿಸುವ ಅವಾಂತರವನ್ನು ನಿಭಾಯಿಸುವಲ್ಲಿ ಕಂದಾಯ ಅಧಿಕಾರಿಗಳು ವಿಫಲವಾಗಿದ್ದರೆ. ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ರಾಜಕಾಲುವೆ, ಚರಂಡಿ, ಬಂಡಿ ದಾರಿ ಅಭಿವೃದ್ಧಿಪಡಿಸದೇ ರ್ನಿಲಕ್ಷ$್ಯವಹಿಸಿದ್ದಾರೆ. ಆದ್ದರಿಂದ ಕೆರೆಗೆ ಹರಿಯಬೇಕಾದ ಮಳೆನೀರು ರಸ್ತೆಯ ಮೇಲೆ ಹರಿದು ರೈತರ ಬೆಳೆ ಹಾಗೂ ಬಡವರ ಮನೆಗಳಿಗೆ ನುಗ್ಗುತ್ತಿದೆ ಎಂದು ಆರೋಪಿಸಿದರು.

ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಅಂಜಿನಪ್ಪ ಮಾತನಾಡಿ, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಕೆರೆ&ಕುಂಟೆಗಳಾಗಿ ಬದಲಾಗಿ, ಕಲುಷಿತ ನೀರು ಬಡವರ ಮನೆಗೆ ನುಗ್ಗಿ ಬದಕನ್ನು ಬೀದಿಗೆ ತಂದಿದೆ, ಆದರೂ ಅಧಿಕಾರಿಗಳು ರ್ನಿಲಕ್ಷ ವಹಿಸಿದ್ದಾರೆ ಎಂದು ಕೀಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net