

ತರೀಕೆರೆ: ಅಜ್ಜಂಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ 86 ಕೆರೆಗಳ ಪೈಕಿ 27 ಕೆರೆಗಳು ಅತಿ ಕ್ರಮಿಸಲಾಗಿದ್ದು, ಸರ್ವೇ ಮೂಲಕ ಗಡಿ ಗುರುತಿಸಿ ಕೆರೆಯಂಗಳ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಜ್ಜಂಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಲಭ್ಯವಿರುವ ಮಾಹಿತಿಯನ್ವಯ ಗೌರಾಪುರ, ಮುಂಡ್ರೆ, ಬಗ್ಗವಳ್ಳಿ, ಹೆಗ್ಗಡಿಹಳ್ಳಿ, ಚೆನ್ನಾಪುರ, ಕಾರೇಹಳ್ಳಿ, ನಾಗವಂಗಲ, ಸೊಲ್ಲಾಪುರ, ಸೊಕ್ಕೆ, ಬಸವಾಪುರ, ಅತ್ತಿಮೊಗ್ಗೆ, ಶಿವನಿ, ಅತ್ತಿಗಟ್ಟೆ, ಗಡಿಹಳ್ಳಿ, ಕಲ್ಲೇನಹಳ್ಳಿ ಸೇರಿ ತಾಲೂಕಿನ ಇನ್ನಿತರ ಕಡೆಯ ಕೆರೆಗಳು ಒತ್ತುವರಿಯಾಗಿದೆ. ಅತಿಕ್ರಮಣದಾರರಿಗೆ ನೋಟಿಸ್ ನೀಡಿ ಪೊಲೀಸರ ರಕ್ಷಣೆ ಪಡೆಯುವ ಮೂಲಕ ಕೆರೆ ತೆರವು ಕಾರ್ಯಾಚರಣೆ ಕಾರ್ಯ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ತಾಪಂ ಇಒ ಎಂ.ಕೆ.ವಿಜಯ ಕುಮಾರ್, ಉಪ ತಹಸೀಲ್ದಾರ್ ಮುರಳಿ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕಾರ್ತಿಕ್, ಕಂದಾಯ ನಿರೀಕ್ಷಕ ಶಿವಕುಮಾರ್, ಸತೀಶ್‌ನಾಯ್ಕ, ನರೇಗಾ ಸಹಾಯಕ ನಿರ್ದೇಶಕ ನವೀನ್ ಮತ್ತಿತರರಿದ್ದರು.