

ಕಿರಣ್, ಬುಕ್ಕಾಪಟ್ಟಣ
ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬ ವಿದ್ಯುತ್ ತಂತಿಗೆ ಸಿಲುಕಿ ಮೃತಪಟ್ಟಿದ್ದ ಟನೆ ಹಾಗೂ ಇತ್ತೀಚೆಗೆ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಒಣಗಿದ ಮರ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದರೂ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಹೋಬಳಿ ವ್ಯಾಪ್ತಿಯಲ್ಲಿ ಇನ್ನೂ ಹಲವು ಮರಗಳು ಅವಡಗಳನ್ನು ಆಹ್ವಾನಿಸುತ್ತಿವೆ.
ಹೋಬಳಿಯ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ವಿದ್ಯುತ್ ಕಂಬದ ಬಳಿಯಿರುವ ಆಲದ ಮರ ಹುಳ ತಿಂದಿದ್ದು, ಇತ್ತೀಚೆಗೆ ಬರುತ್ತಿರುವ ಗಾಳಿ&ಮಳೆಗೆ ಯಾವಾಗ ಬೇಕಾದರೂ ವಿದ್ಯುತ್ ತಂತಿ ಮೇಲೆ ಬೀಳುವ ಸಂಭವ ಇದೆ. ಮರ ಬಿದ್ದರೆ ವಿದ್ಯುತ್ ತಂತಿ ತುಂಡಾಗಿ ಇದರ ಅಕ್ಕಪಕ್ಕವಿರುವ ಐದಾರು ಅಂಗಡಿ ಮಳಿಗೆಗಳು ವಿದ್ಯುತ್ ಅವಡಕ್ಕೆ ಒಳಗಾಗುವ ಅಪಾಯದಲ್ಲಿವೆ. ಆದ್ದರಿಂದ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು, ಅಪಾಯದ ಹಂತದಲ್ಲಿರುವ ಹಳೇ ಆಲದ ಮರವನ್ನು ತೆರವುಗೊಳಿಸಿ, ಜನರ ಆತಂಕ ದೂರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇಂದಿರಾನಗರದ ಕಿರಿಯ ಪ್ರಾಥಮಿಕ ಶಾಲೆ ಎದುರಿರುವ ಟ್ರಾನ್ಸ್ಾರ್ಮರ್ ಪಕ್ಕದಲ್ಲಿಯೇ ಆಲದ ಮರ ಬೀಳುವ ಹಂತದಲ್ಲಿದ್ದು, ಜೋರಾಗಿ ಮಳೆ ಸುರಿದರೆ ಮರ ಬಿದ್ದು ಅವಡ ಸಂಭವಿಸಲಿದೆ. ಇನ್ನೇನು ಶಾಲೆ ಪ್ರಾರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳ ಸಂಚಾರ ಹೆಚ್ಚಿರುತ್ತದೆ. ಸಣ್ಣ ಮಕ್ಕಳು, ವೃದ್ಧರು, ಮಹಿಳೆಯರು ಓಡಾಡುವಾಗ ಮರ ಮುರಿದು ಬಿದ್ದು ಸಾವು&ನೋವು ಸಂಭವಿಸಿದರೆ ಯಾರು ಹೊಣೆ?.
ಸೈಯದ್ ಹುಸೇನ್ ಗ್ರಾಮಸ್ಥ ಇಂದಿರಾನಗರ
ಗ್ರಾಪಂ ಸಿಬ್ಬಂದಿ ಹಾಗೂ ಪಿಡಿಒ ಅರ್ನಿದಿಷ್ಟಾವಧಿ ಮುಷ್ಕರದಲ್ಲಿದ್ದಾರೆ. ಇವರು ಬಂದ ತಕ್ಷಣ ಪತ್ರ ವ್ಯವಹಾರದ ಮೂಲಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ, ಒಣಗಿದ ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.
ಮುಜಾಯಿದ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಕ್ಕಾಪಟ್ಟಣ
ಮರ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಥವಾ ಪಿಡಬ್ಲ್ಯುಡಿ ಈವರೆಗೆ ಯಾವುದೇ ಮನವಿ ನೀಡಿಲ್ಲ. ಮನವಿ ಸಲ್ಲಿಸಿದರೆ ಶ್ರೀವೇ ಮರ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗುವುದು.
ಚಂದನ್ ಕುಮಾರ್ ವಲಯ ಅರಣ್ಯಾಧಿಕಾರಿ
ಮರ ಕಡಿಯಲು ವಿದ್ಯುತ್ ತಂತಿ ತೆಗೆದು ಅನುವು ಮಾಡಿಕೊಡುತ್ತೇವೆ. ಆದರೆ, ಮರ ತೆರವುಗೊಳಿಸುವ ಕೆಲಸ ಅರಣ್ಯ ಇಲಾಖೆ ಮಾಡಬೇಕಿದೆ. ಮರ ತೆರವಿನ ನಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
ಪ್ರಭಾಕರ್ ಬೆಸ್ಕಾಂ ಶಾಖಾಧಿಕಾರಿ