

ಬೆಳ್ತಂಗಡಿ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಕಲ್ಮಂಜ ಶಾಲಾ ಆವರಣ ಮತ್ತು ಬಾವಿಯೊಗಿನ ಕಳೆ ಕೀಳುವ ಸಚ್ಛತಾ ಕಾರ್ಯಕ್ರಮ ನಡೆಯಿತು.
ಪ್ರವೇಶ ದ್ವಾರವನ್ನೂ ಸ್ವಚ್ಛಗೊಳಿಸಿದ ತಂಡ ಬಾಳೆ ಗಿಡ ಮತ್ತು ಮಾವಿನೆಲೆಯ ತೋರಣವನ್ನೂ ಕಟ್ಟುವ ಮೂಲಕ ನವ ವರ್ಷದ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲಾ ಆವರಣ ಅಣಿಗೊಳಿಸಿದರು. ತಂಡದಲ್ಲಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಸಂತೋಷ್ ಬೆಳಾಲು, ಸುಧೀರ್ ಕಲ್ಮಂಜ, ರವೀಂದ್ರ ಉಜಿರೆ ಮತ್ತು ರಾಘವೇಂದ್ರ ಉಜಿರೆ ಹಾಗೂ ಸಚಿನ್ ಭಿಡೆ ಮುಂಡಾಜೆ ಭಾಗವಹಿಸಿದ್ದರು.