

ಕಡಬ: ವಿವಿಧ ಇಲಾಖೆಗಳ ನೇತೃತ್ವದಲ್ಲಿ ತಾಲೂಕಿನಾದ್ಯಂತ ನಡೆಯುತ್ತಿರುವ ಸ್ವಚ್ಛ ಸಂಸ್ಕೃತಿ, ನಮ್ಮ ಸಂಸ್ಕೃತಿ ಸ್ವಚ್ಛ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಕಾಣಿಯೂರು ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಕಾಣಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಕಾಣಿಯೂರಿನಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.
ಸ್ವಚ್ಛತಾ ಶ್ರಮದಾನದಲ್ಲಿ ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ., ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಗ್ರಾಮ ಪಂಚಾಯಿತಿ ಸದಸ್ಯರಾದ ಗಣೇಶ್ ಉದನಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಗ್ರಾಪಂ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ದೇವಿಪ್ರಸಾದ್ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ತೇಜಕುಮಾರಿ ಉದ್ಲಡ್ಡ, ಪ್ರವೀಣ್ ಚಂದ್ರ ರೈ ಕುಮೇರು, ಲಲಿತಾ ದರ್ಖಾಸು, ಸುನಂದಾ ಅಬ್ಬಡ, ಅಂಬಾಕ್ಷಿ ಕೂರೇಲು, ಸುಲೋಚನಾ ಮಿಯೋಲ್ಪೆ, ಕಾಣಿಯೂರು ಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ ಕೆ., ಎಸ್‌ಡಿಎಂ ಸಿ ಅಧ್ಯಕ್ಷ ಪರಮೇಶ್ವರ ಅನಿಲ, ಬೊಬ್ಬೆಕೇರಿ ಶಾಲಾ ಮುಖ್ಯಶಿಕ್ಷಕ ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷ ಸುನೀತಾ ಗಣೇಶ್, ನಾಣಿಲ ಶಾಲಾ ಮುಖ್ಯಶಿಕ್ಷಕ ಪದ್ಮಯ್ಯ ಗೌಡ, ಚಾರ್ವಾಕ ಶಾಲಾ ಮುಖ್ಯಶಿಕ್ಷಕ ರಾಮೇಶಿ ಮೊದಲಾದವರು ಭಾಗವಹಿಸಿದರು.
ಕಾಣಿಯೂರು ಮುಖ್ಯರಸ್ತೆಯಿಂದ ಪುಣ್ಚತ್ತಾರು ತನಕ ಸ್ವಚ್ಛತಾ ಸ್ವಚ್ಛತೆ ನಡೆಲಾಯಿತು.