ಪ್ರಕೃತಿ ರಕ್ಷಣೆ ಜತೆಗೆ ಶುಚಿತ್ವ : ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ಸಲಹೆ

Mul_Cleaning
Published on

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ

ನಮ್ಮ ಪ್ರಕೃತಿಯನ್ನು ರಕ್ಷಿಸುವ ಹೊಣೆಯೊಂದಿಗೆ ಸ್ವಚ್ಛತೆ ನಮ್ಮ ಜೀವನದ ಮೊದಲ ಆದ್ಯತೆಯಾಗಲಿ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಹೇಳಿದರು.

ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, ಹಳೆಯಂಗಡಿ ಆಶ್ರಯದಲ್ಲಿ ತೋಕೂರು ಅಂಗನವಾಡಿ ಕೇಂದ್ರ ತೋಕೂರು ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ-2024 ಕಾರ್ಯಕ್ರಮದಡಿ ತೋಕೂರು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷ ಹೇಮನಾಥ್ ಅಮೀನ್, ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ, ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿ ಸುನೀಲ್ ದೇವಾಡಿಗ, ಪರಿಸರ ಸಂರಕ್ಷಣಾ ಕಾರ್ಯದರ್ಶಿ ಚಂದ್ರಶೇಖರ್ ದೇವಾಡಿಗ, ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ದೇವಾಡಿಗ, ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ ಎಸ್.ಶೆಟ್ಟಿಗಾರ್, ಮಾಜಿ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಜಗದೀಶ್ ಕುಲಾಲ್, ಸದಸ್ಯರಾದ ಗಣೇಶ್ ದೇವಾಡಿಗ, ಗೌತಮ್ ಬೆಲ್ಚಡ, ಧರ್ಮಾನಂದ ಶೆಟ್ಟಿಗಾರ್, ನೀರಜ್ ಕಿರೋಡಿಯನ್, ಪಾಂಡುರಂಗ, ರಮೇಶ್ ಕರ್ಕೇರ, ಬಾಲಕೃಷ್ಣ, ಪ್ರಮೋದ್ ಆಚಾರ್ಯ, ಸುಶಾನ್ ದೇವಾಡಿಗ, ಪದ್ಮನಾಭ ಕುಲಾಲ್, ಅಂಗನಾಡಿ ಸಹಾಯಕಿ ಸುಜಾತಾ ಎಸ್.ಕುಲಾಲ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net