ಶುಚಿತ್ವ ತರಲಿದೆ ಆರೋಗ್ಯ ಭಾಗ್ಯ

HLK SWACHATHE 30
Published on

ಹೊಳಲ್ಕೆರೆ: ಸ್ವಚ್ಛತೆ ಕೇವಲ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲ. ಜನರು ಕೂಡ ಕೈಜೊಡಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ನ್ಯಾಯಾಧೀಶ ಎಸ್.ಶರವಣನ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ವೈಯಕ್ತಿಕ ಜತೆಗೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಕೊಂಡರೆ ಆರೋಗ್ಯ ಲಭಿಸಲಿದೆ ಎಂದರು.

ಮುಖ್ಯಾಧಿಕಾರಿ ಎ.ವಾಸಿಂ ಮಾತನಾಡಿ, ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಛವಾಗಿರಿಸಲು ಶ್ರಮಿಸುತ್ತಿದ್ದಾರೆ. ಇವರ ಈ ನಿಸ್ವಾರ್ಥ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಹೇಳಿದರು.

ಆರೋಗ್ಯ ನಿರೀಕ್ಷಕರಾದ ಶೌಕತ್, ಪ್ರಶಾಂತ್, ದಫೇದಾರ್ ಶಿವಕುಮಾರ್, ಎಂ.ಪಿ.ಉಮೇಶ್, ಆರ್.ಅನಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net