ಎಫ್‌ಎಂಸಿ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತಾ ರ‍್ಯಾಲಿ

Cleanliness rally by FMC college students
Published on

ಮಡಿಕೇರಿ:

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಡಿಕೇರಿ ನಗರಸಭೆ, ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಇಲಾಖೆ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್. ಸಿ. ಸಿ. ಘಟಕಗಳ ಸಹಯೋಗದಲ್ಲಿ ಈಚೆಗೆ ಸ್ವಚ್ಛತಾ ಹೀ ಸೇವಾ 2024, ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತಾ ರ‍್ಯಾಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಮೇ. ಡಾ. ರಾಘವ ಬಿ. ಈ ರ‍್ಯಾಲಿಗೆ ಚಾಲನೆ ನೀಡಿದರು. ಮಡಿಕೇರಿ ನಗರದ ಚೌಕಿ ವೃತ್ತದಿಂದ ಆರಂಭಗೊAಡು ರ‍್ಯಾಲಿ ರಾಜಾಸೀಟ್‌ನಲ್ಲಿ ಕೊನೆಗೊಂಡಿತು.

ವಿಶ್ವ ಪ್ರವಾಸೋದ್ಯಮ ದಿನ 2024ರ ಅಂಗವಾಗಿ ಹಮ್ಮಿಕೊಂಡಿದ್ದ ಈ ಸ್ವಚ್ಛತಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಡಿಕೇರಿ ಸ್ವಚ್ಛತೆಯು ಒಂದು ದಿನಕ್ಕೆ ಸೀಮಿತವಾಗದೆ ದಿನನಿತ್ಯ ಅನುಸರಿಸಬೇಕು. ಇಂದಿನ ಯುವ ಪೀಳಿಗೆ ಜಿಲ್ಲಾಡಳಿತದೊಂದಿಗೆ ಪಾಲ್ಗೊಂಡು ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಪಣತೊಡಬೇಕು ಎಂದರು.

ಕಾಲೇಜಿನ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ 60 ಸ್ವಯಂಸೇವಕರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಜಾಸೀಟ್ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಲಾಯಿತು.
ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಶೈಲಶ್ರೀ ಕೆ., ಅಲೋಕ್ ಬಿಜೈ, ಅಧ್ಯಾಪಕರಾದ ಖುರ್ಷಿದ್ ಬಾನು, ಅರ್ಷಕ್ ಹಬೀಬ್ ಹಾಗೂ ಶರತ್ ಪಿ.ಜಿ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net