ಮಾಣಿಬೆಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ರಮ

swacchata
ಮಾಣಿಬೆಟ್ಟು ಪ್ರದೇಶದಲ್ಲಿ ಪ್ರಾಚೀನ ಪುಷ್ಕರಣಿಯ ಸ್ವಚ್ಛತಾ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.
Published on

ಶಿರ್ವ: ಶ್ರೀನಿಕೇತನ ವಸ್ತು ಸಂಗ್ರಹಾಲಯ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ ಕುಕ್ಕೆ ಸುಬ್ರಹ್ಮಣ್ಯ, ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಉಡುಪಿ ಹಾಗೂ ಉಡುಪಿಗೆ ಬನ್ನಿ ಯೂಟ್ಯೂಬ್ ಚಾನೆಲ್ ಜಂಟಿ ಸಹಯೋಗದಲ್ಲಿ ಪ್ರಾಚ್ಯಃ ತೌಳವ ಕರ್ಣಾಟ ಎಂಬ ಶೀರ್ಷಿಕೆಯಡಿ ಶಿರ್ವ ಗ್ರಾಮ ವ್ಯಾಪ್ತಿಯ ಮಾಣಿಬೆಟ್ಟು ಪ್ರದೇಶದಲ್ಲಿ ಪ್ರಾಚೀನ ಪುಷ್ಕರಣಿಯ ಸ್ವಚ್ಛತಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಾಜ ಸೇವಕ ವಿಶ್ವನಾಥ್ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಲಕೃಷ್ಣ ಉಪಾಧ್ಯಾಯ ನೇತೃತ್ವ ವಹಿಸಿದ್ದರು. ಮುಖ್ಯ ಸಂಯೋಜಕ ಶ್ರೀನಿಕೇತನ ವಸ್ತು ಸಂಗ್ರಹಾಲಯ, ಶ್ರುತೇಶ್ ಆಚಾರ್ಯ, ಪ್ರೊ.ಎಸ್.ಎ ಕೃಷ್ಣಯ್ಯ, ಡಾ.ಗಣೇಶ್ ಪ್ರಸಾದ್ ಜಿ. ನಾಯಕ್ ಉಪಸ್ಥಿತರಿದ್ದರು. ಉಮೇಶ್ ಆಚಾರ್ಯ ಪ್ರಸ್ತಾವನೆಗೈದರು. ಶ್ರಾವ್ಯಾ ಆರ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net