ಮುಕ್ತಿಧಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ

sindanur
sindanur
Published on

ಸಿಂಧನೂರು ನಗರದ ಬ್ರಾಹ್ಮಣ ಸಮಾಜದ ಜನಾರ್ಧನ ಮುಕ್ತಿ ಧಾಮದ ಸ್ವಚ್ಛತಾ ಕಾರ್ಯಕ್ರಮವು ಶನಿವಾರ ಬೆಳಗ್ಗೆ ನಡೆಯಿತು.

ಬ್ರಾಹ್ಮಣ ಸಮಾಜದ ಮುಖಂಡೆರು ಮುಕ್ತಿ ಧಾಮದಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನು ಕಡಿದು ಅಲ್ಲಲ್ಲಿ ಬೆಳೆದಿದ್ದ ಮುಳ್ಳು ಜಾಲಿಗಳನ್ನು ಒಂದೆಡೆ ಸೇರಿಸಿ ಸುಡಲಾಯಿತು. ಘನ ತ್ಯಾಜ್ಯ ವಸ್ತುಗಳನ್ನು ಒಂದೆಡೆ ಶೇಖರಿಸಿ ಸಾಗಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಆನಂದ ಗೌರಕರ್, ವೆಂಕಟರಾವ್ ಬಂಡಿ, ಹನುಮಂತಚಾರ್ ಪುರೋಹಿತ, ಶಶಿಕಾಂತ್ ಆಚಾರ್, ಜಗನ್ನಾಥ್ ರಾವ್ ಕರಡೋಣಿ, ನಾರಾಯಣರಾವ್ ದೇಸಾಯಿ, ಗುಂಡೂರಾವ್ ಚನ್ನಳ್ಳಿ, ದಿನೇಶ ಹೆಬ್ಬಾಳ, ಕೃಷ್ಣ ಮಲಕಸಮುದ್ರ, ಪುರುಷೋತ್ತಮಾಚಾರ ಜೋಶಿ, ವರದಾಚಾರ್, ರಾಘವೇಂದ್ರ ಆಚಾರ್ಯ ಮಸ್ಕಿ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net