

ಇಂಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂಡಿ ಶಾಖೆ ವತಿಯಿಂದ 162ನೆ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಜರುಗಿದ ಸಪ್ತಾಹ ಕಾರ್ಯಕ್ರಮದಲ್ಲಿ ನಗರದ ಬಸ್ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.
ಎಬಿವಿಪಿಯ ಪ್ರಾಂತ್ಯಕಾರ್ಯಕಾರಣಿ ಸದಸ್ಯ ಸಚೀನ ಧಾನಗೊಂಡ ಅವರು ಮಾತನಾಡಿ, ಸ್ವಚ್ಛತೆ ಹಾಗೂ ಆರೋಗ್ಯ ನಡುವೆ ಪರಸ್ಪರ ಸಂಬಂಧವಿದೆ. ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಅಸ್ವಚ್ಛತೆಯ ಕಾರಣದಿಂದಲೆ ಹರಡುತ್ತವೆ. ಇದನ್ನು ಮನಗೊಂಡು ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಬಿವಿಪಿ ಇಂಡಿ ಶಾಖೆಯ ನಗರ ಉಪ್ಪಾದ್ಯ ಶಿವಾನಂದ ಕಾಮಗೊಂಡ, ರಾಹುಲ್ ಜಾಧವ, ಅಂಬರೀಷ್ ಬಿರಾದಾರ, ಸೋಮನಾಥ ಕಟಗೇರಿ, ಸಾರ್ವಭೌಮ ಸಾಳುಂಕೆ, ಸಂದೀಪ ಕಲ್ಯಾಣಿ, ಸಾಹೀಬ್ ನಧಾಪ್, ವಿನಯ ಮೈದರಗಿ, ಮಲ್ಲಿಕಾರ್ಜುನ ಪತ್ತಾರ, ಮಹೇಶ ಮುನಾಳಿ, ದೀಪಾ ಗಿರಣಿವಡ್ಡರ, ಪ್ರೇಮಾ ಹೂಗಾರ, ಸಾವಿತ್ರಿ ಬಡಿಗೇರ ಮತ್ತಿತರರಿದ್ದರು.