

ಮಂಗಳೂರು: ಪೃಥ್ವಿ ಸ್ವಯಂಸೇವಕರು ಚಾರಿಟೇಬಲ್ ಟ್ರಸ್ಟ್, ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್, ಶ್ರೀದೇವಿ ಫ್ರೆಂಡ್ಸ್ ಸರ್ಕಲ್ ಪಚ್ಚನಾಡಿ ಮತ್ತು ಲಯನ್ಸ್ ಕ್ಲಬ್ ನೇತ್ರಾವತಿ ಇವುಗಳ ವತಿಯಿಂದ ಭಾನುವಾರ ಪಚ್ಚನಾಡಿ ಮುಗ್ರೋಡಿ ರುದ್ರ ಭೂಮಿಯ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ರುದ್ರಭೂಮಿಯಲ್ಲಿ ಹುಲ್ಲು, ಪೊದೆ, ಪ್ಲಾಸ್ಟಿಕ್ ಬಾಟಲ್, ಕಸ ಕಡ್ಡಿಗಳು, ಒಣಗಿದ ಎಲೆಗಳಿಂದ ತುಂಬಿ ಹೋಗಿದ್ದು, ರುದ್ರಭೂಮಿಯನ್ನು ಉಪಯೋಗಿಸಲು ಕಷ್ಟಕರವಾಗಿತ್ತು. ಇದನ್ನು ಮನಗಂಡ ಪೃಥ್ವಿ ಸ್ವಯಂಸೇವಕರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆ ಲೋಲಾಕ್ಷಿ ಫನಾರ್ಂಡಿಸ್ ಅವರು ಮೂಲತ್ವ ಫೌಂಡೇಶನ್, ಲಯನ್ಸ್ ಕ್ಲಬ್ ನೇತ್ರಾವತಿ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಪಚ್ಚನಾಡಿ ಇವರನ್ನು ಸಂಪರ್ಕಿಸಿ ಶ್ರಮದಾನ ನಡೆಸಿ, ಸ್ಮಶಾನವನ್ನು ಸ್ವಚ್ಛಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗುವಂತೆ ಮಾಡಿದರು.
ಪೃಥ್ವಿ ಸ್ವಯಂಸೇವಕರ ಅಧ್ಯಕ್ಷರಾದ ಲೋಲಾಕ್ಷಿ ಫನಾರ್ಂಡಿಸ್ ಹಾಗೂ ಸದಸ್ಯರು, ಮೂಲತ್ವ ಫೌಂಡೇಶನ್ ಮೂಲತ್ವ ಪ್ರಕಾಶ್ ಕೋಟ್ಯಾನ್ ಹಾಗೂ ಸದಸ್ಯರು, ಲಯನ್ಸ್ ಕ್ಲಬ್ ನೇತ್ರಾವತಿ ಇದರ ಅಧ್ಯಕ್ಷರು ನಿರ್ಮಲ ಪ್ರಮೋದ್ ಹಾಗೂ ಸದಸ್ಯರು ಮತ್ತು ಶ್ರೀದೇವಿ ಫ್ರೆಂಡ್ಸ್ ಸರ್ಕಲ್ ನ ಗೌರವಾಧ್ಯಕ್ಷರಾದ ಮೋಹನ್ ಪಚ್ಚನಾಡಿ ಹಾಗೂ ತುಕಾರಾಮ್, ಪರಿಸರವಾದಿ ಕೃಷ್ಣಪ್ಪ ಹಾಗೂ ವಾಯು ಸೇನೆಯ ನಿವೃತ್ತ ಅಧಿಕಾರಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು.