ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಶ್ರಮದಾನ: ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನಿಂದ ಸ್ವಚ್ಛತೆ

Cleanliness of Mahadeshwar temple premises Mandya
Published on

ಮಂಡ್ಯ: ನಗರದ ಹಾಲಹಳ್ಳಿ ಬಡಾವಣೆಯಲ್ಲಿರುವ ಮಹದೇಶ್ವರ ದೇವಸ್ಥಾನದ ಆವರಣವನ್ನು ಮಧುರ ಮಂಡ್ಯ ರಂಗಕಲಾ ಟ್ರಸ್ಟ್‌ನ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು.

ಟ್ರಸ್ಟ್‌ನ ಪದಾಧಿಕಾರಿಗಳು ಮುಂಜಾನೆಯೇ ಆಗಮಿಸಿ ದೇವಸ್ಥಾನದ ಅಕ್ಕಪಕ್ಕ ಸಾರ್ವಜನಿಕರು ತಂದು ಎಸೆದು ಹೋಗಿದ್ದ ದೇವರ ಫೋಟೋ ಮತ್ತು ಇನ್ನಿತರ ತ್ಯಾಜ್ಯಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡಿದರು. ಸುಮಾರು ಒಂದು ಟ್ರ್ಯಾಕ್ಟರ್ ತ್ಯಾಜ್ಯ ಸಂಗ್ರಹಿಸಿ ಬೇರೆಡೆಗೆ ರವಾನಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಡಾ.ಉಮೇಶ್ ಮಾತನಾಡಿ, ದೇವಸ್ಥಾನಗಳು ಮನುಷ್ಯನಿಗೆ ನೆಮ್ಮದಿ ಕೊಡುವ ತಾಣಗಳು. ಆದ್ದರಿಂದ ದೇವಸ್ಥಾನದಲ್ಲಿ ಉತ್ತಮ ಪರಿಸರವಿರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ತಂಡದ ಸದಸ್ಯರು ಶ್ರಮದಾನ ಮಾಡಿದ್ದೇವೆ. ಇನ್ನು ಮುಖ್ಯವಾಗಿ ಸಾರ್ವಜನಿಕರು ಸರಿಯಾದ ರೀತಿಯಲ್ಲಿ ತ್ಯಾಜ್ಯಗಳನ್ನು ಬೇರ್ಪಡಿಸಿ ನಗರಸಭೆಯಿಂದ ಬರುವ ವಾಹನಕ್ಕೆ ಕೊಡಬೇಕು ಎಂದು ಜಾಗೃತಿ ಮೂಡಿಸಿದರು.

ಟ್ರಸ್ಟ್ ಕಾರ್ಯದರ್ಶಿ ಚಿಕ್ಕಸಿದ್ದಯ್ಯ, ಆಡಿಟರ್ ರಾಮಲಿಂಗಯ್ಯ, ಅಧ್ಯಾಪಕಿ ನಿರ್ಮಲಾ, ಇಂಜಿನಿಯರ್‌ಗಳಾದ ಸಂದೀಪ್, ಚೇತನ್, ಪುಟ್ಟಸ್ವಾಮಿ, ಆರಕ್ಷಕರಾದ ದೊಡ್ಡಯ್ಯ, ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net