

ಮೈಸೂರು: ಜ್ಯೋತಿನಗರದ ಕುಡುಮ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್‌ನಿಂದ ಭಾನುವಾರ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಲಾಯಿತು.
ಆಷಾಢ ಮಾಸದ ಪ್ರಯುಕ್ತ ಹರಕೆ ಹೊತ್ತವರು ಬೆಟ್ಟದ 1,001 ಮೆಟ್ಟಿಲುಗಳಿಗೆ ಅರಿಶಿಣ, ಕುಂಕುಮ ಹಚ್ಚುತ್ತಾರೆ. ಅರಿಶಿಣ, ಕುಂಕುಮ ಹಚ್ಚಿದ್ದರಿಂದ ಬೆಟ್ಟದ ಮೆಟ್ಟಿಲುಗಳು ಕೆಂಪು ಹಾಸು ಕಲ್ಲಿನಂತಾಗಿದ್ದವು. ಹೀಗಾಗಿ ಜ್ಯೋತಿನಗರದ ಕುಡುಮ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸೇವಾ ಟ್ರಸ್ಟ್‌ನ ಸದಸ್ಯರು ಮುಂಜಾನೆಯಿಂದಲೇ ಬೆಟ್ಟದ ಮೆಟ್ಟಿಲುಗಳಲ್ಲಿ ಭಕ್ತರು ಹಚ್ಚಿದ ಕುಂಕುಮವನ್ನು ಸ್ಚಚ್ಛಗೊಳಿಸಿದರು. ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು ಕೈ ಜೋಡಿಸಿದರು.
ಚಾಮುಂಡಿ ಬೆಟ್ಟದ ಪಾದದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಅಧ್ಯಕ್ಷ ಓ.ಶ್ಯಾಂ ಭಟ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಎಂ.ಕೆ.ಮಹದೇವ, ಖಜಾಂಚಿ ಮಾದೇಶ, ಉಪ ಖಜಾಂಚಿ ಚಿನ್ನಸ್ವಾಮಿ, ಸದಸ್ಯರಾದ ಗೋಪಮ್ಮ, ರಾಜೇಶ್ವರಿ, ಪಲ್ಲವಿ, ನಾಗರತ್ನಾ, ಶಶಿಕಲಾ, ಕೌಶಲ್ಯಾ, ಅಶೋಕ್, ಮಣಿರಾಜ್, ಸೂರ್ಯಕುಮಾರ್ ಇತರರಿದ್ದರು.