ಜನಜಾಗೃತಿಗಾಗಿ ಮಾನವ ಸರಪಳಿ

mkg
Published on

ಹೊನ್ನಾಳಿ: ಗಾಂಧೀಜಿ ಜನ್ಮಜಯಂತಿ ಅಂಗವಾಗಿ ಹೊನ್ನಳಿ ಪುರಸಭೆ ಸಿಬ್ಬಂದಿ, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಪುರಸಭೆ ಆವರಣದಿಂದ ಸಂಗೊಳ್ಳಿರಾಯಣ್ಣ ವೃತ್ತದವರೆಗೆ ಸ್ವಚ್ಛತಾ ಆಂದೋಲನ ನಡೆಸಿದರು.

ನಂತರ ಜಾಥಾ ನಡೆಸಿ, ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಇದೇ ವೇಳೆ ಆರು ತಂಡಗಳಾಗಿ ಪಟ್ಟಣದಲ್ಲಿ ಸ್ವಚ್ಛತೆ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಮಾತನಾಡಿ, ಇಡೀ ದೇಶದಲ್ಲಿ ಪ್ರತಿಯೊಬ್ಬರೂ ನಮ್ಮ ಮನೆಗಳ ಸುತ್ತಮುತ್ತ ಒಂದು ಗಂಟೆ ಸ್ವಚ್ಛ ಮಾಡುವುದರಿಂದ ವಾತಾವರಣ ಶುಭ್ರಗೊಳ್ಳುತ್ತದೆ ಎಂದರು.

ಸ್ವಚ್ಛತಾ ಆಂದೋಲನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ವರ್ಷಪೂರ್ತಿ ನಡೆಸುವಂತಾಗಬೇಕು ಎಂದರು.

ತಾಲೂಕಿನಾದ್ಯಂತ ಭಾನುವಾರ ಸಂಜೀವಿನಿ ಒಕ್ಕೂಟದ ಮಹಿಳೆಯರು, ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ಯುವಕರು ಹಾಗೂ ಶಾಲಾ ಮಕ್ಕಳು ತಮ್ಮ ಗ್ರಾಮಗಳ ದೇವಸ್ಥಾನ, ಶಾಲೆ ಆವರಣದಲ್ಲಿ ಸ್ವಚ್ಛತಾ ಆಂದೋಲನ ನಡೆಸಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೆಗೌಡ, ಉಪನ್ಯಾಸಕರಾದ ಕೊಟ್ರೇಶ್, ಹರೀಶ್, ಪುರಸಭಾ ಸದಸ್ಯೆ ಉಷಾ, ಸ್ವಚ್ಛತಾ ರಾಯಭಾರಿ ಕತ್ತಿಗೆ ನಾಗರಾಜ್, ಆರೋಗ್ಯ ಹಿರಿಯ ನಿರೀಕ್ಷಕ ಪರಮೇಶ್‌ನಾಯ್ಕ, ಕಿರಿಯ ನಿರೀಕ್ಷಕ ಹರ್ಷವರ್ಧನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net