ಸ್ವಚ್ಛತೆಯಿಂದ ರೋಗ ದೂರ

18 NRGL 1
Published on

ನರೇಗಲ್ಲ: ಡೆಂಘೆ ಜ್ವರ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೊಳ್ಳೆಗಳು ಮನುಷ್ಯನ ಆರೋಗ್ಯ ಹಾಳು ಮಾಡುತ್ತಿವೆ. ನಿಮ್ಮ ಮನೆಯ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನರೇಗಲ್ಲ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸಾವಿತ್ರಿ ಕೋರಧಾನ್ಯಮಠ ಹೇಳಿದರು.

ಸಮೀಪದ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಬುಧವಾರ ಡೆಂಘ ಮತ್ತು ಮಲೇರಿಯಾ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಲೇರಿಯಾ, ಡೆಂಘೆಯು ಸೊಳ್ಳೆಯಿಂದ ಹರಡುವ ವೈರಲ್ ಸೋಂಕಾಗಿದ್ದು, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

ಮುಖ್ಯಶಿಕ್ಷಕ ಬಿ.ವಿ. ದೇಸಾಯಿಪಟ್ಟಿ, ಸಿ.ಕೆ. ಕೇಸರಿ, ಸಿಎಚ್​ಒ ಸಂತೋಷ ರಾಠೋಡ, ವಿಜಯಲಕ್ಷ್ಮೀ ಧಡೇಸೂರಮಠ, ಐಶ್ವರ್ಯ ಬಿಂಗಿ, ದೀಪಾ ಮಾದರ, ಕಾವ್ಯಾ ಎಸ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net