ಸಾಂಕ್ರಾಮಿಕ ರೋಗಗಳ ತಡೆಯಲು ಸ್ವಚ್ಛತೆ ಅವಶ್ಯ

19KULAGOD1
Published on

ಕುಲಗೋಡ: ಸಾಂಕ್ರಾಮಿಕ ರೋಗದಿಂದ ಕಾಪಾಡಿಕೊಳ್ಳಲು ಸರ್ಕಾರ ಮನೆಗೊಂದು ಶೌಚಗೃಹ ನಿರ್ಮಿಸುವ ಗುರಿ ಹೊಂದಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮೂಡಲಗಿ ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬಾರ್ಕಿ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಶೌಚಗೃಹ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶೌಚಗೃಹ ಇಲ್ಲದವರು ಪಾಲಕರಿಗೆ ಮನವರಿಕೆ ಮಾಡಿ ಕಟ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ನಾಳೆಯಿಂದ ಡಿ.10ರ ವರೆಗೆ ಪ್ರತಿ ಶಾಲೆಯಲ್ಲಿ ಪ್ರಾರ್ಥನೆ ಸಮಯದಲ್ಲಿ ಅಂದದ ಶೌಚಗೃಹ ಆನಂದ ಜೀವನ. ನಮ್ಮ ಶೌಚಗೃಹ ನಮ್ಮ ಗೌರವ ಎಂದು ಹೇಳುವುದು ಕಡ್ಡಾಯ ಎಂದರು.

ಮೂಡಲಗಿ ಸಿಡಿಪಿಒ ವೈ.ಕೆ. ಗದಾಡಿ, ನರೇಗಾ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ ಮಾತನಾಡಿದರು. ಪ್ರಾಥಮಿಕ ಶಾಲೆ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೌಚಗೃಹ ಜಾಗತಿ ಜಾಥಾ ನಡೆಸಿದರು. ಪಿಡಿಒ ಸದಾಶಿವ ದೇವರ, ಸಿಆರ್​ಪಿ ಸುರೇಶ ತಳವಾರ, ವಿ.ಆರ್​. ಬರಗಿ, ಸಾಯಿರತ್ನ ೌಂಡೇಶನ್​ ಅಧ್ಯ ಶಂಕರ ಹಾದಿಮನಿ, ಎಂ.ಆರ್​. ಕುಲಕರ್ಣ, ಶ್ರೀಪತಿ ಗಣಿ, ಎಚ್​.ಬಿ. ರರೆ, ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ, ಶಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net