ಸ್ವಚ್ಛತೆಯಿಂದ ಆರೋಗ್ಯ ಭಾಗ್ಯ

HYR cmc 04
Published on

ಹಿರಿಯೂರು: ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಬಳಕೆ ಕುರಿತು ಹೆಚ್ಚು ಜಾಗೃತಿ ವಹಿಸಬೇಕು. ಇದರಿಂದ ಆರೋಗ್ಯ ಖಚಿತ ಎಂದು ನಗರಸಭೆ ಪೌರಾಯುಕ್ತ ಎಚ್.ಮಹಾಂತೇಶ್ ಹೇಳಿದರು.

ಸೋಮೇರಹಳ್ಳಿ ತಾಂಡದಲ್ಲಿ ಸೋಮವಾರ ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮನೆಗೂ ಭೇಟಿ ನೀಡಿ ಕುಡಿವ ನೀರಿನ ಬಳಕೆ, ಶೌಚಗೃಹದ ನಿರ್ಮಾಣದ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ. ಜನ ಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನಮಟ್ಟ ಉತ್ತಮವಾಗಲು ಸಾಧ್ಯ ಎಂದು ಹೇಳಿದರು.

ಚಿತ್ರದುರ್ಗ ಕವಾಡಿಗರಹಟ್ಟಿ ದುರಂತ ನಮ್ಮೆಲ್ಲರಿಗೂ ಪಾಠವಾಗಬೇಕು. ಈ ಮೂಲಕ ಸ್ವಚ್ಛತೆ, ಗುಣಮಟ್ಟ ಆಹಾರ, ಶುದ್ಧ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net